ಬಳ್ಳಾರಿ: ಕೊರೊನ ಸೋಂಕಿನಿಂದ ಮೃತಪಟ್ಟ ಮೂವರ ಶವಗಳನ್ನು ಪಿಪಿಇ ಕಿಟ್ ಧರಿಸಿದ ಸಿಬ್ಬಂದಿ ವ್ಯಾನ್‌ನಿಂದ ಎಳೆದು ತಂದು ಒಂದೇ ಹಳ್ಳಕ್ಕೆ ಎಸೆಯುವ 1 ನಿಮಿಷ 28 ಸೆಕೆಂಡಿನ ವಿಡಿಯೊ ಜಿಲ್ಲೆಯ ವಾಟ್ಸಾಪ್ ಗುಂಪುಗಳಲ್ಲಿ ಮಂಗಳವಾರ ಹರಿದಾಡಿತ್ತು.

ಇದು ಬಳ್ಳಾರಿಯಲ್ಲಿ ನಡೆದಿರುವ ಘಟನೆ ಎನ್ನಲಾಗಿದೆ. ಆದರೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಇದನ್ನು ಖಚಿತಪಡಿಸಿಲ್ಲ. ಹೆಚ್ಚುವರಿ ಜಿಲ್ಲಾಧಿಕಾರಿಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಡಿಯೊದಲ್ಲೇನಿದೆ?: ನೀಲಿ ಕಿಟ್ ಧರಿಸಿದ ಇಬ್ಬರು ಹಾಗೂ ಬಿಳಿಯ ಕಿಟ್ ಧರಿಸಿದ ಇಬ್ಬರು ಸಿಬ್ಬಂದಿ ಹಳ್ಳದ ಬಳಿ ನಿಂತು ವ್ಯಾನ್‌ನೆಡೆಗೆ ಹಿಂತಿರುಗುವ ಕ್ಷಣದಿಂದ ವಿಡಿಯೋ ಶುರುವಾಗುತ್ತದೆ.

ಮೂರು ಶವಗಳನ್ನು ಅವರು ಎಳೆದು ತಂದು ಹಳ್ಳಕ್ಕೆ ಎಸೆಯುತ್ತಾರೆ. ಸಮೀಪದಲ್ಲೇ ಇರುವ ವ್ಯಕ್ತಿಯೊಬ್ಬರು 'ನಿಧಾನಕ್ಕೆ' ಎನ್ನುತ್ತಾರೆ.
ಸಿಬ್ಬಂದಿಯೊಬ್ಬರು ತಮ್ಮ ಎರಡೂ ಕೈಗಳ ನಾಲ್ಕು ಬೆರಳುಗಳನ್ನು ಪ್ರದರ್ಶಿಸಿ, 'ಎಂಟವೆ ನೋಡ್ರಪ್ಪ ಟೋಟಲ್ಲು' ಎನ್ನುತ್ತಾರೆ. ವಿಡಿಯೊ ಚಿತ್ರೀಕರಿಸಿದ ವ್ಯಕ್ತಿ 'ಹಾಕಂಗುದ್ರೆ ಒಂದ್ರಲ್ಲೇ ಹಾಕ್ಬುಡಿ ಅತ್ತ ಮುಚ್ ಬುಡೋಣ' ಎನ್ನುತ್ತಾರೆ.

ಶವವನ್ನು ಹಳ್ಳಕ್ಕೆ ಬಿರುಸಿನಿಂದ ಸಿಬ್ಬಂದಿ ಬೀಳಿಸಿದಾಗ 'ಏ ನಿಧಾನಕ್ ಹಾಕ್ರೋ' ಎಂಬ ಮಾತೂ ಕೇಳುತ್ತದೆ.

'ಜಿಲ್ಲೆಯಲ್ಲಿ ಸೋಮವಾರ ಒಂಭತ್ತು ಮಂದಿಯ ಶವಸಂಸ್ಕಾರವಾಗಿದೆ. ಅವರೆಲ್ಲ ಭಾನುವಾರ ಮತ್ತು ಸೋಮವಾರ ಮೃತಪಟ್ಟಿದ್ದರು. ಅಂತ್ಯಸಂಸ್ಕಾರಕ್ಕೆ ನಗರದ ಗುಗ್ಗರಹಟ್ಟಿ ಪ್ರದೇಶದ ಸ್ಮಶಾನವನ್ನು ಗುರುತಿಸಲಾಗಿದೆ' ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

'ಮೃತ ದೇಹಗಳಿಗೆ ಅಗೌರವ ತೋರದೆ ಶವಸಂಸ್ಕಾರ ನಡೆಸಬೇಕು ಎಂಬುದು ನಿಯಮವಿದೆ. ವಿಡಿಯೊ ನಮ್ಮ ಜಿಲ್ಲೆಯದ್ದೇ ಎಂದು ತನಿಖೆಯಲ್ಲಿ ಸಾಬೀತಾದರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.