ಬಳ್ಳಾರಿ: ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಿಯಮ ಮೀರಿ ಬಿಜೆಪಿ ಮುಖಂಡರು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ ಅವರ ಕೊಠಡಿಯೊಳಗೆ ನೆರೆದಿದ್ದರು.

ಶಾಂತಾ ಅವರೊಂದಿಗೆ ವಕೀಲ ಪಟೇಲ್ ಸಿದ್ದಾರೆಡ್ಡಿ, ಮುಖಂಡರಾದ ಎಸ್.ಗುರುಲಿಂಗನಗೌಡ, ನೇಮರಾಜ ನಾಯ್ಕ, ಎಸ್‌ಜೆವಿ ಮಹಿಪಾಲ್ ಇದ್ದರು.

ಅರ್ಜಿಗಳಿಗೆ ಶಾಂತಾ ಅವರಿಂದ ಸಹಿ ಪಡೆಯುವ ಸಂದರ್ಭದಲ್ಲಿ ಶಾಸಕ ಬಿ.ಶ್ರೀರಾಮುಲು ಅವರೊಂದಿಗೆ ಶಾಸಕ ಎನ್.ವೈ.ಗೋಪಾಲಕೃಷ್ಣ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನನಗೌಡ ಸೇರಿ ಇನ್ನಷ್ಟು ಮಂದಿ ಒಳಕ್ಕೆ ಬಂದರು. ಫೋಟೋ, ವಿಡಿಯೊಗಳಿಗಾಗಿ ಶ್ರೀರಾಮುಲು ಅವರೊಂದಿಗೆ ಶಾಂತಾ ಮತ್ತೆ ನಾಮ ಪತ್ರ ಸಲ್ಲಿಸಿದರು.

ನಂತರ ಮುಖಂಡರಾದ ಟಿ.ಎಚ್.ಸುರೇಶ್ ಬಾಬು ಅವರೊಂದಿಗೆ ಬಂದ ಶಾಸಕ ಜಿ.ಸೋಮಶೇಖರ್ ಶಾಂತಾ ಅವರೊಂದಿಗೆ ತಾವೂ ನಿಂತುಕೊಳ್ಳುವುದಾಗಿ ಮನವಿ ಮಾಡಿದರು. ಅದಕ್ಕೆ ಚುನಾವಣಾಧಿಕಾರಿ ಒಪ್ಪಿಗೆ ನೀಡಲಿಲ್ಲ. ಎಲ್ಲರನ್ನೂ ಹೊರಕ್ಕೆ ಕಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.