ಬೆಂಗಳೂರು: ಬೆಂಗಳೂರು ನಗರದಲ್ಲಿ ಐಟಿ ಉದ್ಯೋಗಗಳ ಸಂಖ್ಯೆ 2.5 ಮಿಲಿಯನ್ ಇದ್ದು, ಅದನ್ನು ಮೂರು ಪಟ್ಟು ಹೆಚ್ಚಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಐಟಿ/ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್ ಹೇಳಿದ್ದಾರೆ.

ಡೆಕ್ಕನ್ ಹೆರಾಲ್ಡ್ ಬೆಂಗಳೂರು 2024 ಶೃಂಗಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಮಾಹಿತಿ ತಂತ್ರಜ್ಞಾನ ಶೃಂಗಸಭೆಯಲ್ಲಿ ನಾವು ಹೊಸ ಐಟಿ ನೀತಿ ಬಿಡುಗಡೆ ಮಾಡಿದ್ದೇವೆ. ಐಟಿ ವಲಯದಲ್ಲಿ ಸದ್ಯ 2.5 ಮಿಲಿಯನ್ ಉದ್ಯೋಗಗಳಿದ್ದು, ಅದನ್ನು ಮೂರು ಪಟ್ಟು ಹೆಚ್ಚಿಸಲು ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.

ಜಾಗತಿಕ ಸಾಮರ್ಥ್ಯ ಕೇಂದ್ರಗಳ(ಜಿಸಿಸಿ) ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾ, ಅವು ಕರ್ನಾಟಕದ ಉದ್ಯೋಗ ವಲಯಕ್ಕೆ ಪ್ರಮುಖ ಕೊಡುಗೆ ನೀಡುತ್ತಿವೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯವಾಗಿ, ಜಿಸಿಸಿಗಳು 1.9 ಮಿಲಿಯನ್ ಉದ್ಯೋಗಗಳನ್ನು ಹೊಂದಿವೆ. ಕರ್ನಾಟಕದ 2024-29ರ ಜಿಸಿಸಿ ನೀತಿಯಡಿಯಲ್ಲಿ ರಾಜ್ಯವು 2029ರ ವೇಳೆಗೆ 500 ಹೊಸ ಜಿಸಿಸಿಗಳನ್ನು ಆಕರ್ಷಿಸಲು ಮತ್ತು 3.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಯೋಜಿಸಿದೆ ಎಂದು ಹೇಳಿದ್ದಾರೆ.

ಬೆಂಗಳೂರು ಪ್ರಗತಿ ಜೊತೆಗೆ ಮಂಗಳೂರು, ಹುಬ್ಬಳ್ಳಿ, ಧಾರವಾಡ ಮತ್ತು ಮೈಸೂರು ಮುಂತಾದ ನಗರಗಳು ಬಲಿಷ್ಠ ಉದ್ಯೋಗ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ಎಸ್ಟಿಪಿಐ–ಬೆಂಗಳೂರು ಸಂಸ್ಥೆಯು ಕರ್ನಾಟಕದಾದ್ಯಂತ ಪ್ರಧಾನ ಕಚೇರಿಯ ಜೊತೆಗೆ ಐದು ಉಪ ಕೇಂದ್ರಗಳನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಡಾಟಾ ಕೇಂದ್ರಗಳಿಗೆ ಕೇಂದ್ರ ಬಜೆಟ್ನಲ್ಲಿ ತೆರಿಗೆ ರಜೆ ಘೋಷಿಸಿರುವುದರಿಂದ ಈ ವಲಯದಲ್ಷೂ ಉದ್ಯೋಗ ಸೃಷ್ಟಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ರಾಜ್ಯವು ಬಲಿಷ್ಠ ನಾವೀನ್ಯತೆ ಪರಿಸರ ವ್ಯವಸ್ಥೆಯಿಂದ ಬೆಂಬಲಿತವಾದ ಕೌಶಲ್ಯ ಉಪಕ್ರಮಗಳಿಗೆ ಆದ್ಯತೆ ನೀಡುತ್ತಿದೆ. ಸ್ಟಾರ್ಟ್ಅಪ್ಗಳು ಮತ್ತು ಸಣ್ಣ ಸಂಸ್ಥೆಗಳು ಕೌಶಲ್ಯಯುತ ಪ್ರತಿಭೆಗಳನ್ನು ಸಕ್ರಿಯವಾಗಿ ನೇಮಕ ಮಾಡಿಕೊಳ್ಳುತ್ತಿವೆ, ಅದೇ ಸಮಯದಲ್ಲಿ ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಇತರ ವಲಯಗಳನ್ನು ಅನ್ವೇಷಿಸುತ್ತಿವೆ. ಕೃತಕ ಬುದ್ಧಿಮತ್ತೆ ಐಟಿ ವಲಯದ ಪಥವನ್ನು ಮರುರೂಪಿಸುತ್ತಿವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.