ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಮಂಗಳೂರು ನಗರದೊಳಕ್ಕೆ ಬಂದ ಕಾಡುಕೋಣ

ಮಂಗಳೂರು: ಮಂಗಳವಾರ ಬೆಳಿಗ್ಗೆ ನಗರದೊಳಕ್ಕೆ ಕಾಡುಕೋಣವೊಂದು ಪ್ರವೇಶಿಸಿದ್ದು, ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಿದೆ. ಅದನ್ನು ಕಾಡಿಗೆ ಕಳುಹಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.ಕುದ್ರೋಳಿಯ ವಿಶಾಲ್ ನರ್ಸಿಂಗ್ ಹೋಂ ಸಮೀಪ‌ ಈಗ ಕಾಡುಕೋಣ ಬೀಡುಬಿಟ್ಟಿದೆ. ಅದಕ್ಕೂ ಮುನ್ನ ಹ್ಯಾಟ್ ಹಿಲ್, ಮಣ್ಣಗುಡ್ಡ ಸೇರಿದಂತೆ ನಗರದ ಹಲವೆಡೆ ಓಡಾಡಿದೆ. ಜನವಸತಿ ಪ್ರದೇಶಗಳಲ್ಲೇ ಸುತ್ತಾಡುತ್ತಿದೆ.ಲಾಕ್‌ಡೌನ್ ಜಾರಿಯಲ್ಲಿ ಇರುವುದರಿಂದ ಜನ ಸಂಚಾರ ಮತ್ತು ವಾಹನಗಳ ಸಂಚಾರ ಕಡಿಮೆ ಇದೆ. ಹೀಗಾಗಿ ಕಾಡುಕೋಣ ಅರಣ್ಯದಿಂದ ದಾಟಿಕೊಂಡು ನಗರಕ್ಕೆ ಬಂದಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Published : 5 ಮೇ 2020, 5:29 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT