ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್ ಕಾಯಿನ್ ಮರು ತನಿಖೆ | ಕಟೀಲ್ ಕುಳಿತಲ್ಲಿಯೇ ಬೆವರುತ್ತಿರುವುದು ಏಕೆ?: ಕಾಂಗ್ರೆಸ್‌

Published 28 ಜೂನ್ 2023, 10:18 IST
Last Updated 28 ಜೂನ್ 2023, 10:18 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಸರ್ಕಾರ ಬಿಟ್‌ ಕಾಯಿನ್ ಹಗರಣದ ಬುಡ, ಬೇರುಗಳನ್ನು ಜಾಲಾಡಲಿದೆ ಎಂದಿರುವ ಕಾಂಗ್ರೆಸ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಅವರು ಕುಳಿತಲ್ಲಿಯೇ ಬೆವರುತ್ತಿದ್ದಾರಂತೆ ಏಕಿರಬಹುದು ಎಂದು ತಮಾಷೆ ಮಾಡಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಬಿಟ್ ಕಾಯಿನ್‌ ಪ್ರಕರಣದ ಮರುತನಿಖೆಗೆ ಸರ್ಕಾರ ನಿರ್ಧರಿಸಿದೆ ಎನ್ನುವ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್‌ ಹೀಗೆ ಹೇಳಿದೆ.

ಬಿಟ್ ಕಾಯಿನ್ ಮರು ತನಿಖೆ | ಕಟೀಲ್ ಕುಳಿತಲ್ಲಿಯೇ ಬೆವರುತ್ತಿರುವುದು ಏಕೆ?: ಕಾಂಗ್ರೆಸ್‌

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್, ‘ಬಿಟ್ ಕಾಯಿನ್ ಹಗರಣ ಬಯಲಿಗೆ ಬಂದಾಗ ಬಿಜೆಪಿ ಸರ್ಕಾರ ಪ್ರಕರಣ ಮುಚ್ಚಿಹಾಕಲು ಸರ್ವ ಪ್ರಯತ್ನಗಳನ್ನೂ ಮಾಡಿತ್ತು. ಹಗರಣವನ್ನು ಮುಚ್ಚಿಹಾಕಲು ಯಶಸ್ವಿಯೂ ಆಗಿತ್ತು, ಈಗ ನಮ್ಮ ಸರ್ಕಾರ ಬಿಟ್ ಕಾಯಿನ್ ಹಗರಣದ ಬುಡ, ಬೇರುಗಳನ್ನು ಜಾಲಾಡಲಿದೆ. ಅಂದಹಾಗೆ ನಳಿನ್‌ ಕುಮಾರ್‌ ಕಟೀಲ್‌ ಅವರು ಕುಳಿತಲ್ಲಿಯೇ ಬೆವರುತ್ತಿದ್ದಾರಂತೆ, ಏಕಿರಬಹುದು‘ ಎಂದು ಬಿಜೆಪಿಯನ್ನು ಮಾರ್ಮಿಕವಾಗಿ ಪ್ರಶ್ನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT