ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ಪಡೆದುಕೊಳ್ಳಲು ಬಿ.ಎಲ್ ಸಂತೋಷ್ ಬಣದವರ ಪ್ರಯತ್ನಕ್ಕೆ ಸರಿಯಾದ ಸಮಯ ಈಗ ಬಂದಿದೆ. ‘ಸಂತೋಷ್‘ ಕೂಟದ ಕಲ್ಲೇಟಿಗೆ ಎಲ್ಲಾ ಹಕ್ಕಿಗಳೂ ಉದುರಿ ಬೀಳುತ್ತಿವೆ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ
ಒಕ್ಕಲಿಗ ಸಮುದಾಯ ನಾಯಕ ಸದಾನಂದಗೌಡ ಅವರು ರಾಜಕೀಯ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣ ‘ಎಕ್ಸ್‘ ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
‘ಬಿಜೆಪಿಯಲ್ಲಿ ಬಿ.ಎಲ್ ಸಂತೋಷ್ ಬಣದ ಆಟ ಗೆಲುವಿನತ್ತ ಸಾಗುತ್ತಿದೆ. ಬಿಜೆಪಿಯನ್ನು ಸಂಪೂರ್ಣ ಹಿಡಿತಕ್ಕೆ ಪಡೆಯುವ ಪಕ್ವ ಕಾಲ ಬಂದಿದೆ. ಲಿಂಗಾಯತ ನಾಯಕ ಯಡಿಯೂರಪ್ಪರನ್ನು ಮೂಲೆಯಲ್ಲಿ ಕೂರಿಸಿದ್ದಾರೆ. ಹಿಂದುಳಿದ ವರ್ಗದ ಈಶ್ವರಪ್ಪರನ್ನು ಬಲವಂತವಾಗಿ ನಿವೃತ್ತಿ ಘೋಷಿಸುವಂತೆ ಮಾಡಿದರು. ಈಗ ಒಕ್ಕಲಿಗ ಸದಾನಂದಗೌಡರೂ ಹೈಕಮಾಂಡ್‌ನಿಂದ ಅವಮಾನಕ್ಕೊಳಗಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಸಂತೋಷ ಕೂಟದ ಕಲ್ಲೇಟಿಗೆ ಎಲ್ಲಾ ಹಕ್ಕಿಗಳೂ ಉದುರಿ ಬೀಳುತ್ತಿವೆ! ಕುಮಾರಸ್ವಾಮಿಯವರು ಹೇಳಿದಂತೆ ಇನ್ನೂ ಮುಂದೆ ಬಿಜೆಪಿಯಲ್ಲಿ ಪೇಶ್ವೆ ವಂಶಸ್ಥರದ್ದೇ ಪಾರುಪತ್ಯ.! ಎಂದು ಹೇಳಿದೆ
ಅಂತೂ ಇಂತೂ ಬಿಜೆಪಿಯ ಸಂತೋಷ ಕೂಟದ ಆಟ ಗೆಲುವಿನತ್ತ ಸಾಗುತ್ತಿದೆ,
— Karnataka Congress (@INCKarnataka) November 9, 2023
ಬಿಜೆಪಿಯನ್ನು ಸಂಪೂರ್ಣ ಹಿಡಿತಕ್ಕೆ ಪಡೆಯುವ ಪಕ್ವ ಕಾಲ ಬಂದಿದೆ.
ಲಿಂಗಾಯತ ನಾಯಕ ಯಡಿಯೂರಪ್ಪರನ್ನು ಮೂಲೆಯಲ್ಲಿ ಕೂರಿಸಿದ್ದಾಯ್ತು.
ಹಿಂದುಳಿದ ವರ್ಗದ ಈಶ್ವರಪ್ಪರನ್ನು ಬಲವಂತವಾಗಿ ರಿಟೈರ್ಡ್ ಮಾಡಿದ್ದಾಯ್ತು.
ಈಗ ಒಕ್ಕಲಿಗ ಸದಾನಂದಗೌಡರೂ ಹೈಕಮಾಂಡ್ ನಿಂದ ಅವಮಾನಕ್ಕೊಳಗಾಗಿ…
ಹರಿದ ಪಂಚೆಯಂತಾಗಿರುವ ಬಿಜೆಪಿಯಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ವಲಸಿಗರಿಗೆ ಆಪರೇಷನ್ ಕಮಲ ಮಾಡುವಾಗ ಜಾಮೂನ್ ಕೊಟ್ಟ ಬಿಜೆಪಿ ಈಗ ವಿಷ ಕೊಡುತ್ತಿದೆಯಂತೆ, ಹೀಗೆ ಹೇಳಿದ್ದು ಸ್ವತಃ ಬಿಜೆಪಿಯ ಎಸ್ ಟಿ ಸೋಮಶೇಖರ್!. ಬಿಜೆಪಿ ಕಚೇರಿಯಲ್ಲಿ ಯಾರು ಯಾರಿಗೆ ವಿಷ ಬೆರೆಸುತ್ತಿದ್ದಾರೋ, ಮದ್ದು ಅರೆಯುತ್ತಿದ್ದಾರೋ!... ಇತ್ತ ಕೆ.ಎಸ್ ಈಶ್ವರಪ್ಪ ಎಂಬ ಕೆಲಸವಿಲ್ಲದೆ ನಿವೃತ್ತಿ ಪಡೆದೆ ರಾಜಕಾರಿಣಿ ವಲಸಿಗರ ವಿರುದ್ಧ ನಾಲಿಗೆ ಮಸೆಯುತ್ತಿದ್ದಾರೆ. ಒಟ್ಟಿನಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಕಿತ್ತಾಟ ಎಂಬುವುದು ಮುಗಿಯದ ಧಾರಾವಾಹಿ! ಎಂದು ಟೀಕಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.