ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮುಖಂಡರ ಸಹೋದರರು ಕಳ್ಳದಂಧೆಯಲ್ಲಿ ತೊಡಗಿದ್ದಾರೆ: ಕಾಂಗ್ರೆಸ್‌ ಆರೋಪ

Published 31 ಡಿಸೆಂಬರ್ 2023, 13:33 IST
Last Updated 31 ಡಿಸೆಂಬರ್ 2023, 13:33 IST
ಅಕ್ಷರ ಗಾತ್ರ

ಬೆಂಗಳೂರು: ಅಧಿಕಾರವಿದ್ದಾಗ 40% ಕಮಿಷನ್ , 40 ಸಾವಿರ ಕೋಟಿ ಲೂಟಿಯಲ್ಲಿ ತೊಡಗಿದ್ದ ಬಿಜೆಪಿ ಮುಖಂಡರು, ಇದೀಗ ಸಹೋದರರನ್ನು ಅಖಾಡಕ್ಕೆ ಇಳಿಸಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕಾಂಗ್ರೆಸ್‌, ‘ಸಂಸದ ಪ್ರತಾಪ್‌ ಸಿಂಹ ಸಹೋದರ ಮರಗಳ್ಳತನಕ್ಕೆ, ಬಿಜೆಪಿ ಮುಖಂಡ ಮಣಿಕಂಠ ರಾಥೋಡ್‌ ಸಹೋದರ ಅಕ್ಕಿ ಕಳ್ಳತನದಲ್ಲಿ ತೊಡಗಿದ್ದಾರೆ. ಇನ್ಯಾವ ನಾಯಕರ ಸಹೋದರರು ಮತ್ತವ್ಯಾ ಕಳ್ಳದಂಧೆಯಲ್ಲಿ ತೊಡಗಿದ್ದಾರೆ?’ ಎಂದು ಪ್ರಶ್ನಿಸಿದೆ.

‘ನಾನು ತಿನ್ನುವುದಿಲ್ಲ ಹಾಗೂ ನಿಮಗೆ ತಿನ್ನಲು ಬಿಡುವುದಿಲ್ಲ’ ಎಂಬಂತೆ ಅನ್ನಭಾಗ್ಯದ ಅಕ್ಕಿ ಕದ್ದು ಬಡವರಿಗೆ ‘ನಾ ಖಾನೆದುಂಗಾ’ ಎನ್ನುತ್ತಿದೆಯೇ ಬಿಜೆಪಿ ಎಂದು ಕುಟುಕಿದೆ.

‘ಬಿಜೆಪಿ ನಾಯಕರು ತಮ್ಮ ಅಣ್ಣತಮ್ಮಂದಿರಿಗೆ ತಿನ್ನಿಸಲು ಹೊರಟಿರುವುದು ಪ್ರತಾಪ್ ಸಿಂಹ ಹಾಗೂ ಮಣಿಕಂಠ ರಾಥೋಡ್ ಸಹೋದರರ ಕಳ್ಳತನಗಳು ಈ ಬಗ್ಗೆ ಸಾಕ್ಷಿ ಹೇಳುತ್ತಿವೆ’ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT