ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಸ್‌ವೈ ಹೊಗಳಿದ ಕಟೀಲ್‌

Published : 23 ನವೆಂಬರ್ 2019, 21:02 IST
ಫಾಲೋ ಮಾಡಿ
Comments

‌ಕೆ.ಆರ್‌.ಪೇಟೆ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ‘ಕಾಮಧೇನು, ಸಮರ್ಥ ನಾಯಕ, ಬಸವಣ್ಣನವರ ಅನುಯಾಯಿ’ ಎಂದು ಬಗೆ ಬಗೆಯಾಗಿ ಹೊಗಳಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌, ‘ಯಡಿಯೂರಪ್ಪ ಅವರೊಂದಿಗೆ ಸೇರಿ, ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಸಿ. ನಾರಾಯಣಗೌಡ ಅವರು ಕ್ಷೇತ್ರವನ್ನು ರಾಮರಾಜ್ಯವನ್ನಾಗಿ ಮಾಡಲಿದ್ದಾರೆ’ ಎಂದು ಹೇಳಿದರು.

ಶನಿವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಯುವ ಮುಖಂಡ ಬಿ.ವೈ.ವಿಜಯೇಂದ್ರ ಹಾಗೂ ನಾರಾಯಣಗೌಡ ಎಂಬ ಜೋಡೆತ್ತುಗಳ ನೇತೃತ್ವದಲ್ಲಿ ಕ್ಷೇತ್ರದ ಅಭಿವೃದ್ಧಿ ನಡೆಯುತ್ತದೆ’ ಎಂದರು.

ನಾವು ಒಕ್ಕಲಿಗರಲ್ಲವೇ?

‘ಒಕ್ಕಲಿಗರು ಅಂದರೆ ಕೇವಲ ಹೊಳೆನರಸೀಪುರ ಕುಟುಂಬದ ಸದಸ್ಯರು ಮಾತ್ರವೇ ಅಲ್ಲ. ದೇವೇಗೌಡ ಕುಟುಂಬಕ್ಕೆ ಸೇರಿದ ಜನ್ಮ ಪ್ರಮಾಣಪತ್ರ ಇಲ್ಲ ಅಂದಾಕ್ಷಣ ನಾವು ಒಕ್ಕಲಿಗರಲ್ಲವೇ?’ ಎಂದು ಹರಿಹಾಯ್ದ ಹಾಸನ ಶಾಸಕ ಪ್ರೀತಂ ಗೌಡ, ‘ಅಶ್ವತ್ಥನಾರಾಯಣ, ನಾರಾಯಣಗೌಡ ಎಲ್ಲರೂ ಒಕ್ಕಲಿಗರೇ’ ಎಂದರು.

‘ಜೆಡಿಎಸ್‌, ಕಾಂಗ್ರೆಸ್‌ ಮುಖಂಡರು ನನಗೆ ಚಪ್ಪಲಿಯಲ್ಲಿ ಹೊಡೆಯಲು ಯತ್ನಿಸಿದ್ದಾರೆ. ಮುಂದೆ ಕಲ್ಲಿನಿಂದ ಹೊಡೆಸಲು ಮುಂದಾಗಿದ್ದಾರೆ. ಹೊಡೆಯಲೇ ಬೇಕು ಅಂದರೆ ಪಬ್ಲಿಕ್‌ನಲ್ಲಿ ಹೊಡೀಬೇಡಿ, ಜನರಿಗೆ ತೊಂದರೆಯಾಗುತ್ತದೆ. ನಮ್ಮ ಮನೆಗೇ ಬಂದು ಹೊಡೆಯಿರಿ’ ಎಂದು ಕೆ.ಸಿ.ನಾರಾಯಣಗೌಡ ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT