ಕೂಡ್ಲಿಗಿ (ವಿಜಯನಗರ ಜಿಲ್ಲೆ): ‘ಯಾವ ಕಾರಣಕ್ಕೂ ಬಿಜೆಪಿ ಬಿಡಲ್ಲ, ಫೆ.5ರ ನಂತರ ದೆಹಲಿಗೆ ಹೋಗಲಿದ್ದೇನೆ. ಕೆಲವೊಂದು ಸಂವಹನ ಕೊರತೆಯಿಂದ ಮಾತ್ರ ಪಕ್ಷದಲ್ಲಿ ಗೊಂದಲ ಇದ್ದು, ಅದನ್ನು ವರಿಷ್ಠರು ಸರಿಪಡಿಸುವ ವಿಶ್ವಾಸ ಇದೆ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ತಾಲ್ಲೂಕಿನ ಕಾನಹೊಸಹಳ್ಳಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಜನಾರ್ದನ ರೆಡ್ಡಿ ಅವರು ಸಹ ಪಕ್ಷದ ಕಾರ್ಯಕರ್ತರೇ ಹೊರತು ವರಿಷ್ಠರಲ್ಲ, ನಾನು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ ಎಂದು ಅವರು ಹೇಳಿದ್ದಕ್ಕೆ ಮಹತ್ವ ಕೊಡಬೇಕಿಲ್ಲ. ಪಕ್ಷದ ವರಿಷ್ಠರು ನಾನು ಪಕ್ಷದಲ್ಲೇ ಇರಬೇಕು ಎಂದು ಹೇಳಿದ್ದಾರೆ, ಹೀಗಾಗಿ ಪಕ್ಷವನ್ನು ನಾನು ಬಿಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಯತ್ನಾಳ್, ರಮೇಶ್ ಜಾರಕಿಹೊಳಿ, ಸುಧಾಕರ್ ಅವರೆಲ್ಲ ಕೆಲವು ವ್ಯಕ್ತಿಗಳ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ಪಕ್ಷದ ವಿರುದ್ಧ ಮಾತನಾಡಿಲ್ಲ. ಅವರೆಲ್ಲ ಇದ್ದರಷ್ಟೇ ಪಕ್ಷ ಸಂಘಟನೆ ಸಾಧ್ಯ. ಸಂವಹನ ಕೊರತೆಯಿಂದಾಗಿ ಇಂತಹ ಸನ್ನಿವೇಶ ಸೃಷ್ಟಿಯಾಗಿದೆ. ಪಕ್ಷದ ವರಿಷ್ಠರು ಅದನ್ನು ಸರಿಪಡಿಸುವ ವಿಶ್ವಾಸ ಇದೆ’ ಎಂದರು ಶ್ರೀರಾಮುಲು ಹೇಳಿದರು.

’ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕರು, ಅವರ ನೇತೃತ್ವದಲ್ಲಿ ನಾವೆಲ್ಲ ಕೆಲಸ ಮಾಡಿದವರು. ವಿಜಯೇಂದ್ರ ಕೂಡಾ ಅವರಂತೆಯೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂಬುದೇ ಎಲ್ಲರ ಆಶಯ’ ಎಂದು ನುಡಿದರು.

ನಾನೂ ಆಕಾಂಕ್ಷಿ: ‘ಪಕ್ಷದ ಅಧ್ಯಕ್ಷ ಸ್ಥಾನದ ಮೇಲೆ ನಾನೂ ಆಕಾಂಕ್ಷಿಯಾಗಿದ್ದೇನೆ. ಆದರೆ ಪಕ್ಷದಲ್ಲಿ ಚುನಾವಣೆ ವ್ಯವಸ್ಥೆ ಇದೆ. ಅದರಂತೆಯೇ ಎಲ್ಲವೂ ನಡೆಯುತ್ತದೆ. ಏನಿದ್ದರೂ ವರಿಷ್ಠರ ನಿರ್ಧಾರವೇ ಅಂತಿಮವಾಗುತ್ತದೆ. ರಾಜ್ಯಸಭಾ ಸದಸ್ಯ ಸ್ಥಾನ ನೀಡಬೇಕು ಎಂದೂ ನಾನು ಕೇಳಿಲ್ಲ, ಅವಕಾಶ ಇದ್ದರೆ ಕೊಡಿ ಎಂದು ಕೇಳಿದ್ದೇನೆ, ಕೊಟ್ಟರೆ ಸಂತೋಷ’ ಎಂದರು.

‘ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ನಾನು ಭಾವನಾತ್ಮಕವಾಗಿ ಮಾತನಾಡಿದ್ದೇನೆಯೇ ಹೊರತು ಅದು ಖಡಾಖಂಡಿತ ನಿರ್ಧಾರವಲ್ಲ. ಅಖಂಡ ಬಳ್ಳಾರಿಯಲ್ಲಿ ಐದು ಮೀಸಲು ಕ್ಷೇತ್ರಗಳಿದ್ದು, ಎಲ್ಲಾ ಕಡೆಯಿಂದಲೂ ನನಗೆ ಆಹ್ವಾನ ಇದೆ. ಅದರೆ ಮುಂದಿನ ಮೂರು ವರ್ಷ ಪಕ್ಷ ಸಂಘಟನೆ, ಬಲಪಡಿಸುವುದೇ ನನ್ನ ಗುರಿ. ಅಂತಿಮವಾಗಿ ಟಿಕೆಟ್ ಯಾರಿಗೆ ಕೊಡಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ’ ಎಂದು ಶ್ರೀರಾಮುಲು ಹೇಳಿದರು.

ಜನ ಉತ್ತರಿಸಿದ್ದಾರೆ: ‘ಜನಾರ್ದನ ರೆಡ್ಡಿ ಅವರು ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿರಬಹುದು, ಅದಕ್ಕೆ ರಾಜ್ಯದ ಜನರೇ ಉತ್ತರ ಕೊಟ್ಟಿದ್ದಾರೆ’ ಎಂದು ಹೇಳಿದ ಅವರು, ‘ಕಾಂಗ್ರೆಸ್ ಪಕ್ಷದವರು ನನಗೆ ಬಿಜೆಪಿಯಲ್ಲಿ ಸ್ಥಾನ ಇಲ್ಲ ಎಂಬ ಕಾರಣಕ್ಕೆ ಆಹ್ವಾನ ನೀಡಿರಬಹುದು, ಅವರೆಲ್ಲ ನಮ್ಮ ಸಮಕಾಲೀನರೇ, 30 ವರ್ಷದಿಂದ ರಾಜಕೀಯದಲ್ಲಿ ಇದ್ದು, ಒಟ್ಟಾಗಿ ಹೋರಾಡಿದವರೇ. ಆದರೆ ಅವರ ಆಹ್ವಾನವನ್ನು ಮನ್ನಿಸಿ ಪಕ್ಷ ಬಿಟ್ಟು ಹೋಗುವುದಿಲ್ಲ’ ಎಂದರು.

ಸಿಎಂ ಆಗಲು ಸಿದ್ಧ: ‘2028ರಲ್ಲಿ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ನಾವೆಲ್ಲ ಒಗ್ಗಟ್ಟಿನಿಂದ ಪ್ರಯತ್ನಿಸಲಿದ್ದೇವೆ. ಪಕ್ಷ ಬಯಸಿದರೆ ಮುಖ್ಯಮಂತ್ರಿ ಆಗಲು ಸಹ ನಾನು ಸಿದ್ಧ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.