ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿಂಗ್‌ ಕ್ಷೇತ್ರದ ಹೆಬ್ಬಾಗಿಲು ‘ಬ್ರೆಟ್‌’ ಸಲ್ಯೂಷನ್ಸ್‌

Last Updated 10 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಕಿಂಗ್‌, ವಿಮೆ ಮತ್ತು ಹಣಕಾಸು ಸಂಸ್ಥೆಗಳಲ್ಲಿ ನೇಮಕಾತಿ ಸಂಬಂಧ ನಡೆಯುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್‌ ಮೂಲಕ ತರಬೇತಿ ನೀಡುತ್ತಿರುವ ನಗರದ ಪ್ರತಿಷ್ಠಿತ ‘ಬ್ಯಾಂಕಿಂಗ್‌ ರಿಕ್ರೂಟ್‌ಮೆಂಟ್‌ ಟೋಟಲ್‌ ಸಲ್ಯೂಷನ್ಸ್‌’ (ಬ್ರೆಟ್‌) ಸಂಸ್ಥೆಯು ಇದೀಗ ‘ಕ್ಲಾಸ್‌ರೂಮ್‌’ ತರಗತಿಗಳ ಮೂಲಕವೂ ಆಸಕ್ತರಿಗೆ ತರಬೇತಿ ನೀಡಲು ಮುಂದಾಗಿದೆ.

ದೇಶದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿರುವ ಕ್ಷೇತ್ರಗಳಲ್ಲಿ ಬ್ಯಾಂಕಿಂಗ್‌ ಕ್ಷೇತ್ರವೂ ಒಂದು. ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಬ್ಯಾಂಕಿಂಗ್‌ ಮ್ಯಾನೇಜ್‌ಮೆಂಟ್‌ (ಎನ್‌ಐಬಿಎಂ) ಮತ್ತು ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮಗಳ (ಎನ್‌ಎಸ್‌ಡಿಸಿ) ವರದಿ ಪ್ರಕಾರ ಈ ಕ್ಷೇತ್ರದಲ್ಲಿ ವರ್ಷಕ್ಕೆ ಸುಮಾರು ಎರಡು ಲಕ್ಷದಷ್ಟು ಹುದ್ದೆಗಳು ಸೃಷ್ಟಿಯಾಗುತ್ತಿವೆ. ಈ ವಲಯದಲ್ಲಿ ದೇಶದಾದ್ಯಂತ ವರ್ಷಕ್ಕೆ 22ರಿಂದ 25ರಷ್ಟು ನೇಮಕಾತಿ ಪರೀಕ್ಷೆಗಳು ನಡೆಯುತ್ತಿವೆ.

ರಾಜ್ಯದ ಬ್ಯಾಂಕಿಂಗ್‌ ವಲಯದಲ್ಲಿ ಪ್ರತಿ ವರ್ಷ ಸುಮಾರು 20 ಸಾವಿರದಷ್ಟು ಉದ್ಯೋಗ ಸೃಷ್ಟಿಯಾಗುತ್ತಿವೆ. ಆದರೆ ಈ ಕುರಿತು ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಹಾಗೂ ಆಯ್ಕೆಯಾಗುವ ಕರ್ನಾಟಕದ ಅಭ್ಯರ್ಥಿಗಳ ಸಂಖ್ಯೆ ಕಡಿಮೆ. ಬದಲಾಗಿರುವ ಪರೀಕ್ಷಾ ವಿಧಾನಗಳ ಕುರಿತು ಜ್ಞಾನದ ಕೊರತೆಯಿಂದಾಗಿ ರಾಜ್ಯದ ಅಭ್ಯರ್ಥಿಗಳ ಆಯ್ಕೆ ಕಡಿಮೆಯಿದೆ. ಇದನ್ನು ಮನಗಂಡು ಕರ್ನಾಟಕದ ಹೆಚ್ಚಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಯ್ಕೆಯಾಗಲಿ ಎಂಬ ಆಶಯದೊಂದಿಗೆ ‘ಬ್ರೆಟ್‌ ಸಲ್ಯೂಷನ್ಸ್‌’ 2014ರಲ್ಲಿ ಕಾರ್ಯಾರಂಭ ಮಾಡಿತು.

ಪರಿಣತರ ತಂಡ

ಕರ್ನಾಟಕ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಓರಿಯಂಟಲ್ ಬ್ಯಾಂಕ್‌ ಆಫ್‌ ಕಾಮರ್ಸ್‌, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ರಾಷ್ಟ್ರೀಯ ವಿಮಾ ಅಕಾಡೆಮಿ, ಎನ್‌ಐಬಿಎಂ, ಎಚ್‌.ಎಸ್‌.ಬಿ.ಸಿ ಸೇರಿದಂತೆ ವಿವಿಧ ಬ್ಯಾಂಕ್‌, ವಿಮಾ ಕಂಪನಿಗಳಲ್ಲಿ ಅತ್ಯುನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಸಾಕಷ್ಟು ಅನುಭವ ಹೊಂದಿರುವ ಹಿರಿಯರು ಮತ್ತು ಕಿರಿಯರನ್ನು ಒಳಗೊಂಡ ತಂಡ ಒಂದಾಗಿ ‘ಬ್ರೆಟ್‌ ಸಲ್ಯೂಷನ್ಸ್‌’ ಸ್ಥಾಪಿಸಿದೆ.

ಬಿ. ಅಶೋಕ ಹೆಗ್ಡೆ
ಬಿ. ಅಶೋಕ ಹೆಗ್ಡೆ

‘ಅರ್ಹರಾಗಿದ್ದರೂ ಅರಿವಿನ ಕೊರತೆಯಿಂದಾಗಿ ರಾಜ್ಯದ ಹಲವರು ಬ್ಯಾಂಕಿಂಗ್‌ ಪರೀಕ್ಷೆಗಳಲ್ಲಿ ವಿಫಲರಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳ ಪ್ರತಿಭಾವಂತ ಮತ್ತು ಹಿಂದುಳಿದ ವರ್ಗಗಳ ಯುವಕರ ಪರಿಸ್ಥಿತಿಯಂತೂ ಇನ್ನೂ ಗಂಭೀರವಾಗಿದ್ದು, ಅವರು ಬ್ಯಾಂಕಿಂಗ್‌ ಪರೀಕ್ಷೆಗಳಿಂದಲೇ ದೂರಾಗುತ್ತಿದ್ದಾರೆ. ಇದನ್ನು ಗಮನಿಸಿ ಸಾಮಾನ್ಯ ಜನರಿಗೂ, ಗ್ರಾಮೀಣ ಭಾಗದ ಬಡ ಪ್ರತಿಭಾವಂತರಿಗೂ ಕನಿಷ್ಠ ಖರ್ಚಿನಲ್ಲಿ ಬ್ಯಾಂಕಿಂಗ್‌ ಮತ್ತು ವಿಮಾಸಂಸ್ಥೆಗಳ ಪರೀಕ್ಷೆಗಳಿಗೆ ಸನ್ನದ್ದುಗೊಳಿಸುವ ಉದ್ದೇಶದಿಂದ ಬ್ರೆಟ್‌ ಸಲ್ಯೂಷನ್ಸ್‌ ಸ್ಥಾಪಿಸಲಾಯಿತು’ ಎಂದು ಸಂಸ್ಥೆಯ ಹುಟ್ಟಿನ ಕುರಿತು ಮಾಹಿತಿ ನೀಡಿದರು ಈ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಿ. ಅಶೋಕ ಹೆಗ್ಡೆ.

ಅವರು ಕರ್ನಾಟಕ ಬ್ಯಾಂಕ್‌ನಲ್ಲಿ ಜನರಲ್‌ ಮ್ಯಾನೇಜರ್‌ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಜಯನಗರದಲ್ಲಿ ತರಗತಿ

‘2014ರಿಂದ ಅತಿ ಕಡಿಮೆ ಖರ್ಚಿನಲ್ಲಿ ಆನ್‌ಲೈನ್‌ ಮೂಲಕ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿದ್ದೇವೆ. ನಮ್ಮ ಅಭ್ಯರ್ಥಿಗಳಿಗೆ ಆನ್‌ಲೈನ್‌ ತರಗತಿಯ ಜತೆಗೆ ಕ್ಲಾಸ್‌ರೂಮ್‌ ತರಗತಿಯ ಅಗತ್ಯ ಇದೆ ಎಂಬುದನ್ನು ಇತ್ತೀಚೆಗೆ ಮನಗಂಡಿದ್ದೇವೆ. ಹೀಗಾಗಿ ಬೆಂಗಳೂರಿನ ಜಯನಗರದಲ್ಲಿ ಇದೇ 30ರಿಂದಕ್ಲಾಸ್‌ರೂಮ್‌ ತರಗತಿ ಆರಂಭಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.

‘ಎರಡೂ ಬಗೆಯ ತರಬೇತಿ ಅಭ್ಯರ್ಥಿಗಳಿಗೆ ದೊರೆತರೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಕ್ಲಾಸ್‌ರೂಮ್‌ ತರಗತಿಯಲ್ಲಿ ಬ್ಯಾಂಕ್‌ಗಳ ಪರೀಕ್ಷಾ ಪಠ್ಯಕ್ರಮದಂತೆ ಪಾಠಗಳು, ಕಠಿಣ ಪ್ರಶ್ನೆಗಳನ್ನು ಉತ್ತರಿಸುವ ಸರಳ ವಿಧಾನಗಳನ್ನು ಹೇಳಿಕೊಡಲಾಗುತ್ತದೆ. ಅಲ್ಲದೆ 12 ಸಾವಿರಕ್ಕೂ ಹೆಚ್ಚಿನ ಪ್ರಶ್ನೆಗಳುಳ್ಳ ಅಣಕು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ರೀತಿಯ ನಿರಂತರ ಅಭ್ಯಾಸವು ಅಭ್ಯರ್ಥಿಗಳಲ್ಲಿ ಸ್ಪರ್ದಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲ, ಸಾಮರ್ಥ್ಯ ಮತ್ತು ವೇಗವನ್ನು ಹೆಚ್ಚಿಸುತ್ತದೆ.’ ಎಂದು ಅವರು ವಿವರಿಸುತ್ತಾರೆ.

ಡಿಪ್ಲೊಮಾಗೂ ತರಬೇತಿ

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್‌ ಮತ್ತು ಫೈನಾನ್ಸ್‌ (ಐಐಬಿಎಫ್‌) ಸಂಸ್ಥೆ ನಡೆಸುತ್ತಿರುವ ಡಿಪ್ಲೊಮಾ ಇನ್‌ ಬ್ಯಾಂಕಿಂಗ್‌ ಮತ್ತು ಫೈನಾನ್ಸ್‌ (ಡಿಬಿಎಫ್‌) ಹಾಗೂ ಜೆಎಐಐಬಿ ಮತ್ತು ಸಿಎಐಐಬಿ ಪರೀಕ್ಷೆಗಳಿಗೂ ಆನ್‌ಲೈನ್‌ ಮತ್ತು ಕ್ಲಾಸ್‌ರೂಮ್‌ ತರಬೇತಿಗಳನ್ನು ನೀಡುತ್ತಿದೆ.

ಹೆಚ್ಚಿನ ಮಾಹಿತಿಗೆ: ವೆಬ್‌ಸೈಟ್‌ www.brets.in ಭೇಟಿ ನೀಡಿ.

ಭಾನುವಾರ ಉಚಿತ ಕಾರ್ಯಾಗಾರ

ಬ್ಯಾಂಕಿಂಗ್‌, ಹಣಕಾಸು, ವಿಮಾ ಸಂಬಂಧಿ ಕ್ಷೇತ್ರಗಳಲ್ಲಿನ ಉದ್ಯೋಗಾವಕಾಶ, ನೇಮಕಾತಿಗೆ ಕುರಿತ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಪರೀಕ್ಷಾ ಸಿದ್ಧತೆಗೆ ಸಂಬಂಧಿಸಿದಂತೆ ಆಸಕ್ತ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು ಬ್ರೆಟ್‌ ಸಲ್ಯೂಷನ್ಸ್‌ ಉಚಿತ ಕಾರ್ಯಾಗಾರವನ್ನು ಭಾನುವಾರ ಹಮ್ಮಿಕೊಂಡಿದೆ.

ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿನ 4102 ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಐಬಿಪಿಎಸ್‌ ಗುರುವಾರವಷ್ಟೇ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 4 ಕೊನೆಯ ದಿನ. ಈ ಪರೀಕ್ಷೆಯ ಆಕಾಂಕ್ಷಿಗಳೂ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದು.

ಸ್ಥಳ: ಶ್ರೀಸತ್ಯ ಪ್ರಮೋದ ಕಲ್ಯಾಣ ಮಂಟಪ (ಉತ್ತರಾದಿ ಮಠ ಕಾಂಪ್ಲೆಕ್ಸ್‌), ನಂ 6, ಪಂಪ ಮಹಾಕವಿ ರಸ್ತೆ (ನ್ಯಾಷನಲ್‌ ಕಾಲೇಜು ಎದುರು), ಬಸವನಗುಡಿ.

ಸಮಯ: ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30. ಉಚಿತ ಪ್ರವೇಶ.

ಸಂಪರ್ಕಕ್ಕೆ: 98445 16560/ 72590 28984

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT