ಉಡುಪಿ: ಕಾರ್ಕಳ ತಾಲ್ಲೂಕಿನ ಮಾಳ ಚೆಕ್‌ಪೋಸ್ಟ್ ಸಮೀಪದ ಅಬ್ಬಾಸ್‌ಕಟ್ಟೆ ಬಳಿ ಶನಿವಾರ ಪ್ರವಾಸಿ ಬಸ್ ಅಪಘಾತವಾಗಿದ್ದು, 9ಮಂದಿ ಮೃತಪಟ್ಟಿದ್ದಾರೆ.

ಬಸ್‌ನಲ್ಲಿ 35 ಮಂದಿ ಪ್ರಯಾಣಿಸುತ್ತಿದ್ದರು.ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಅಪಘಾತಕ್ಕೀಡಾಗಿದೆ. ಹಲವರಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಧಾವಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್‌ಗಳು ತೆರಳಿವೆ.

6 ಮಂದಿ ಪುರುಷರು, 3 ಮಹಿಳೆಯರು ಮೃತಪಟ್ಟಿದ್ದು,ಅವರನ್ನು ಯೋಗೇಂದ್ರ, ಪ್ರೀತಂಗೌಡ, ಬಸವರಾಜ, ಅನುಜ್ಞಾ,ರಾಧಾ ರವಿ, ಶಾರುಲ್, ರಂಜಿತಾ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಕಾರ್ಕಳ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತವಾದ ಬಸ್‌ಮೈಸೂರಿನಿಂದ ಕುದುರೆಮುಖ ಮಾರ್ಗವಾಗಿ ಕಾರ್ಕಳಕ್ಕೆ ಬರುತ್ತಿತ್ತು. ಮೈಸೂರಿನ ಐಟಿ ಕಂಪೆನಿಯೊಂದರ ರೆಕಾರ್ಡ್ ನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿ ಪ್ರವಾಸಕ್ಕೆ ಬಂದಿದ್ದರು ಎಂಬುದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.