ಬೆಂಗಳೂರು: ‘ತಟಸ್ಥರು ಎಂದು ಹೇಳಿಕೊಳ್ಳುವ ನಾಯಕರು ಏನು ಎಂಬುದು ಗೊತ್ತು. ಇವರು ಮೊದಲಿಗೆ ಬಿ.ಎಸ್.ಯಡಿಯೂರಪ್ಪ ಅವರ ತೇಜೋವಧೆ ಮಾಡುತ್ತಿರುವ ನಾಯಕರ ಬಾಯಿ ಮುಚ್ಚಿಸಲಿ’ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

‘ಎರಡೂ ಬಣದವರು ತಾಳ್ಮೆ ಕಳೆದುಕೊಳ್ಳದೇ ಯಡಿಯೂರಪ್ಪ ಮತ್ತು ಇತರ ನಾಯಕರ ಮಾರ್ಗದರ್ಶನದಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆ ಕುರಿತಂತೆ ಸುದ್ದಿಗಾರರು ಪ್ರಶ್ನಿಸಿದಾಗ, ವಿಜಯೇಂದ್ರ ಮೇಲಿನಂತೆ ಪ್ರತಿಕ್ರಿಯಿಸಿದರು.

ತಮ್ಮ ವಿರುದ್ಧ ಪರೋಕ್ಷವಾಗಿ ಟೀಕೆ–ಟಿಪ್ಪಣಿ ಮಾಡುತ್ತಿದ್ದ ಮತ್ತು ಯಾವುದೇ ಬಣಗಳ ಜತೆ ಗುರುತಿಸಿಕೊಳ್ಳದೇ ‘ತಟಸ್ಥರು’ ಎಂದು ಹೇಳಿಕೊಳ್ಳುತ್ತಿದ್ದ ಆರ್.ಅಶೋಕ ಮತ್ತು ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಪರೋಕ್ಷವಾಗಿ ಟೀಕಾ ಪ್ರಹಾರ ನಡೆಸಿದರು.

‘ವೈಯಕ್ತಿಕವಾಗಿ ನಾನು ಯಾವುದೇ ಅಪಮಾನ ಸಹಿಸಿಕೊಳ್ಳಲು ತಯಾರಿದ್ದೇನೆ. ಆದರೆ ಪಕ್ಷಕ್ಕಾಗಿ ಸುದೀರ್ಘವಾಗಿ ದುಡಿದ ಯಡಿಯೂರಪ್ಪ ಅವರನ್ನು ಅತ್ಯಂತ ಕೀಳು ಭಾಷೆಯಲ್ಲಿ ನಿಂದಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಇವರೆಲ್ಲ ಮನಸ್ಸಿಗೆ ಬಂದಂತೆ ನಿಂದಿಸುತ್ತಿರುವಾಗ ತಟಸ್ಥ ಎಂದು ಹೇಳಿಕೊಳ್ಳುವವರು ಯಾಕೆ ಸುಮ್ಮನಿದ್ದಾರೆ? ಅದಕ್ಕೆ ಕಡಿವಾಣ ಹಾಕದೆ ಸುಮ್ಮನಿರುವುದೂ ಅಪರಾಧವೇ’ ಎಂದರು.

‘ಯಡಿಯೂರಪ್ಪ ಮೇಲಿನ ವಾಗ್ದಾಳಿ ತಡೆಯಲು ರಾಷ್ಟ್ರೀಯ ನಾಯಕರೇ ಬರಬೇಕಾ? ಈ ನಾಯಕರಿಗೆ ಜವಾಬ್ದಾರಿ ಇಲ್ಲವಾ? ನನ್ನ ವಿರುದ್ಧ ಎಷ್ಟೇ ದೂಷಣೆ, ಟೀಕೆಗಳು ಬಂದರೂ ಸುಮ್ಮನೆ ಇದ್ದೇನೆ. ತಿರುಗೇಟು ನೀಡಲು ಬರುವುದಿಲ್ಲ ಎಂದಲ್ಲ. ಅಧ್ಯಕ್ಷನಾಗಿರುವುದರಿಂದ ಪ್ರತಿಕ್ರಿಯೆ ನೀಡುತ್ತಿಲ್ಲ. ಆ ಘನತೆ ಕಾಯ್ದುಕೊಂಡಿದ್ದೇನೆ. ಇದರಿಂದ ಕಾರ್ಯಕರ್ತರನ್ನು ಅವಮಾನ ಮಾಡಿದಂತಾಗುತ್ತದೆ’ ಎಂದು ವಿಜಯೇಂದ್ರ ಹೇಳಿದರು.

‘ನನ್ನ ಕುರಿತು ವರಿಷ್ಠರಿಗೆ ಯಾವುದೇ ರೀತಿ ದೂರು ಕೊಡಲಿ, ಇಲ್ಲವೆ ನಾಲ್ಕು ಗೋಡೆಗಳ ಮಧ್ಯೆ ಮಾತನಾಡಲಿ. ಅದನ್ನು ಬಿಟ್ಟು ಪ್ರತಿನಿತ್ಯವೂ ಸಾರ್ವಜನಿಕವಾಗಿ ಬಾಯಿಗೆ ಬಂದಂತೆ ಮಾತನಾಡುವುದು ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ಮಾಡುವ ಅಪಮಾನ. ನಾನು ತಿರುಗೇಟು ನೀಡಲಾರಂಭಿಸಿದರೆ, ಅದರಿಂದ ಅವರು ಕುಗ್ಗಿ ಹೋಗುತ್ತಾರೆ. ಪಕ್ಷದ ಸಂಘಟನೆಯ ಮೇಲೆ ಪರಿಣಾಮ ಬೀರುತ್ತದೆ’ ಎಂದರು.

‘ಪಕ್ಷದ ಎಲ್ಲ ಹಿರಿಯರ ಜತೆಗೆ ಗೌರವದಿಂದಲೇ ನಡೆದುಕೊಂಡಿದ್ದೇನೆ. ಸಲಹೆ–ಸೂಚನೆಗಳನ್ನು ತೆಗೆದುಕೊಂಡೇ ಕಾರ್ಯನಿರ್ವಹಿಸುತ್ತಿದ್ದೇನೆ. ಯಾರನ್ನೂ ಕಡೆಗಣಿಸಿಲ್ಲ. ಅಂತಹ ಜಾಯಮಾನವೂ ನನ್ನದಲ್ಲ’ ಎಂದು ಅವರು ಹೇಳಿದರು.

ನನಗೂ ಅನುಭವವಿದೆ:

‘ವಿಜಯೇಂದ್ರಗೆ ಅನುಭವ ಇಲ್ಲ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಮೊದಲಿಗೆ ಕಾರ್ಯಕರ್ತನಾಗಿ ಬಿಜೆಪಿಯಲ್ಲಿ ಕೆಲಸ ಆರಂಭಿಸಿದೆ. ಆ ಬಳಿಕ ಬಿಜೆಪಿ ನಗರ ಜಿಲ್ಲೆ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೆ. ಸದಸ್ಯತ್ವ ಅಭಿಯಾನ ಮತ್ತು ಸಂಘಟನಾ ಪರ್ವದಲ್ಲೂ ಕರ್ನಾಟಕ ರಾಜ್ಯ ಘಟಕ ದೇಶದಲ್ಲೇ ಮುಂಚೂಣಿಯಲ್ಲಿದೆ. ಹೀಗಾಗಿ ನನಗೆ ಅನುಭವದ ಕೊರತೆ ಇದೆ ಎಂದು ಹೇಳುವುದರಲ್ಲಿ ಹುರುಳಿಲ್ಲ. ಅಧ್ಯಕ್ಷ ಚುನಾವಣೆ ಮುಗಿದ ಮೇಲೆ ಎಲ್ಲದ್ದಕ್ಕೂ ಉತ್ತರ ಕೊಡುತ್ತೇನೆ’ ಎಂದರು.

‘ಇಲ್ಲಿ ನಡೆಯುತ್ತಿರುವ ಚಟುವಟಿಕೆಗೆ ಹೈಕಮಾಂಡ್ ಅಥವಾ ಬಿ.ಎಲ್.ಸಂತೋಷ್ ಅವರ ಬೆಂಬಲವಿಲ್ಲ. ಆ ರೀತಿ ಬಿಂಬಿಸುವುದೂ ಸರಿಯಲ್ಲ’ ಎಂದೂ ವಿಜಯೇಂದ್ರ ಹೇಳಿದರು.

ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆ ಯಾವುದೇ ಕ್ಷಣದಲ್ಲಾದರೂ ನಡೆಯಬಹುದು. ಇದೇ 20ರೊಳಗೆ ಎಲ್ಲ ಪ್ರಕ್ರಿಯೆಯೂ ಮುಗಿಯಲಿದೆ
ಬಿ.ವೈ.ವಿಜಯೇಂದ್ರ ಅಧ್ಯಕ್ಷ ಬಿಜೆಪಿ ರಾಜ್ಯ ಘಟಕ

ಯಾವುದೇ ಗುಂಪಿನ ಸಭೆ ಕರೆದಿಲ್ಲ: ಬೊಮ್ಮಾಯಿ

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮಿತಿ ಮೀರಿದ್ದು ಜನಸಾಮಾನ್ಯರು ರೈತರು ಮಹಿಳೆಯರು ಸಂಕಷ್ಟದಲ್ಲಿದ್ದಾರೆ. ಆತ್ಮಹತ್ಯೆ ಪ್ರಕರಣಗಳೂ ಹೆಚ್ಚುತ್ತಿವೆ. ಇದರ ವಿರುದ್ಧ ಸಮರ ಸಾರಬೇಕಾಗಿರುವ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯದ ಮಾತಿನ ಸಮರ ದುರದೃಷ್ಟಕರ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ‘ಪಕ್ಷದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ. ನಾನು ಯಾವುದೇ ಗುಂಪುಗಾರಿಕೆಯಲ್ಲಿ ನಂಬಿಕೆ ಇಟ್ಟವನಲ್ಲ. ಆದ್ದರಿಂದ ನಾನು ಯಾವುದೇ ಗುಂಪಿನ ಸಭೆ ಕರೆಯುವ ಪ್ರಶ್ನೆಯೂ ಉದ್ಭವಿಸುವುದಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ಎಲ್ಲರನ್ನೂ ಒಂದುಗೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಹಲವಾರು ಮುಖಂಡರಲ್ಲಿ ನಾನೂ ಒಬ್ಬ. ಎರಡೂ ಕಡೆ ತಾಳ್ಮೆ ಕಳೆದುಕೊಳ್ಳದೆ ಬಿ.ಎಸ್.ಯಡಿಯೂರಪ್ಪ ಮತ್ತು ಇತರ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಒಟ್ಟಿಗೆ ಕುಳಿತು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಬೇಕು’ ಎಂದಿದ್ದಾರೆ. ‘ವರಿಷ್ಠರು ಕೂಡಲೇ ಕರ್ನಾಟಕದಲ್ಲಿನ ಪಕ್ಷದ ಬೆಳವಣಿಗೆಯ ಬಗ್ಗೆ ಗಮನ ಹರಿಸಿ ಎಲ್ಲ ಪ್ರಮುಖರ ಜೊತೆಗೆ ಚರ್ಚೆ ಮಾಡಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.