ದುಬೈ: ಆಗಸ್ಟ್ ತಿಂಗಳ ‘ಐಸಿಸಿ ತಿಂಗಳ ಆಟಗಾರ’ ಪ್ರಶಸ್ತಿಗೆ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸೇರಿದಂತೆ ನ್ಯೂಜಿಲೆಂಡ್ ತಂಡದ ಮ್ಯಾಟ್ ಹೆನ್ರಿ ಹಾಗೂ ವೆಸ್ಟ್ ಇಂಡೀಸ್ನ ಜೇಡನ್ ಸೀಲ್ಸ್ ಅವರು ನಾಮನಿರ್ದೇಶನಗೊಂಡಿದ್ದಾರೆ.

ಆಗಸ್ಟ್ನಲ್ಲಿ ಭಾರತದ ವೇಗದ ಬೌಲರ್ ಸಿರಾಜ್ ಅವರು ಕೇವಲ ಒಂದು ಪಂದ್ಯ ಮಾತ್ರ ಆಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮಾತ್ರ ಆಡಿದ್ದು, ಓವಲ್ನಲ್ಲಿ ಜರುಗಿದ ಪಂದ್ಯದಲ್ಲಿ 46 ಓವರ್ಗಳಲ್ಲಿ 9 ವಿಕೆಟ್ ಕಬಳಿಸಿದ್ದರು. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಿರಾಜ್ 185.3 ಓವರ್ಗಳನ್ನು ಎಸೆದಿದ್ದರು. 23 ವಿಕೆಟ್ಗಳನ್ನು ಪಡೆಯುವ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಆಗಿದ್ದರು.

ಸಿರಾಜ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಯುವ ಪಡೆಯಿಂದ ಕೂಡಿದ್ದ ಭಾರತ ತಂಡವು ಇಂಗ್ಲೆಂಡ್ ನೆಲದಲ್ಲಿ 2–2ರಲ್ಲಿ ಸರಣಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

ನ್ಯೂಜಿಲೆಂಡ್ನ ಮ್ಯಾಟ್ ಹೆನ್ರಿ ಅವರು ಜಿಂಬಾಬ್ವೆ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 16 ವಿಕೆಟ್ ಪಡೆದು ಗಮನ ಸೆಳೆದಿದ್ದರು.

ಪಾಕಿಸ್ತಾನ ವಿರುದ್ಧ 34 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ತಂಡವು ಏಕದಿನ ಸರಣಿ ಗೆಲ್ಲುವಲ್ಲಿ ಜೇಡನ್ ಸೀಲ್ಸ್ ಅವರು ಮಹತ್ವದ ಪಾತ್ರವಹಿಸಿದ್ದರು. 3 ಪಂದ್ಯಗಳ ಸರಣಿಯಲ್ಲಿ 10 ವಿಕೆಟ್ ಕಬಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.