ರಾಜ್ಯ ಪಠ್ಯಕ್ರಮದ ಫಲಿತಾಂಶದ ಅಂಕಗಳನ್ನು ನೇರವಾಗಿ ಪಡೆಯಲಾಗಿದೆ. ಸಿಬಿಎಸ್‌ಇ, ಐಸಿಎಸ್‌ಇ ಮೊದಲಾದ ಪಠ್ಯಕ್ರಮದಲ್ಲಿ 12ನೇ ತರಗತಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ತಮ್ಮ ಅಂಕಪಟ್ಟಿ ಮತ್ತು 2024ನೇ ಸಾಲಿನ ಸಿಇಟಿ ಪ್ರವೇಶ ಪತ್ರವನ್ನು ಸೆ. 30ರ ಒಳಗೆ ಪ್ರಾಧಿಕಾರಕ್ಕೆ ಸಲ್ಲಿಸಿ, ಆಯ್ಕೆ ದಾಖಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.