ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ಮನೆಗಳ ಪೂರ್ಣಕ್ಕೆ ಒತ್ತಾಯ: ಎಸ್‌.ಎನ್‌.ಚನ್ನಬಸಪ್ಪ

Published 4 ಡಿಸೆಂಬರ್ 2023, 16:11 IST
Last Updated 4 ಡಿಸೆಂಬರ್ 2023, 16:11 IST
ಅಕ್ಷರ ಗಾತ್ರ

ವಿಧಾನಸಭೆ: ಶಿವಮೊಗ್ಗದ 23 ಕೊಳೆಗೇರಿ ನಿವಾಸಿಗಳಿಗೆ ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿ ನಿರ್ಮಿಸಬೇಕಿದ್ದ 800ಕ್ಕೂ ಹೆಚ್ಚು ಮನೆಗಳನ್ನು ಐದು ವರ್ಷಗಳಾದರೂ ಪುರ್ಣಗೊಳಿಸಿಲ್ಲ ಎಂದು ಬಿಜೆಪಿಯ ಎಸ್‌.ಎನ್‌.ಚನ್ನಬಸಪ್ಪ ದೂರಿದರು.

ಗಮನ ಸೆಳೆಯುವ ಸೂಚನೆ ಮೇಲೆ ಮಾತನಾಡಿದ ಅವರು, ಫಲಾನುಭವಿಗಳು ತಮ್ಮ ಪಾಲಿನ ಕಂತು ಪಾವತಿಸುವ ಜತೆಗೆ, ಐದು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇದರಿಂದ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. 500 ಮನೆಗಳೂ ಪೂರ್ಣಗೊಂಡಿಲ್ಲ. ಆದರೂ, ಗುತ್ತಿಗೆದಾರರಿಗೆ ಬಹುತೇಕ ಹಣ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ನೀಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ವಾರದ ಒಳಗೆ ಶಾಸಕರ ಸಮ್ಮುಖದಲ್ಲೇ ಸಭೆ ಕರೆದು ಸಮಸ್ಯೆ ಇತ್ಯರ್ಥ ಮಾಡುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT