ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟಿ ಪೋಷಕ ಪುರುಷ ನೌಕರರಿಗೂ 6 ತಿಂಗಳ ಶಿಶುಪಾಲನ ರಜೆ

Published 9 ಜೂನ್ 2023, 19:08 IST
Last Updated 9 ಜೂನ್ 2023, 19:08 IST
ಅಕ್ಷರ ಗಾತ್ರ

ಬೆಂಗಳೂರು: ಮಗುವಿನ ಪಾಲನೆಯ ಹೊಣೆಹೊತ್ತ ಒಂಟಿ ಪೋಷಕ ಪುರುಷ ನೌಕರರಿಗೂ 6 ತಿಂಗಳ ಶಿಶುಪಾಲನಾ ರಜೆ ಪಡೆಯುವ ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ.

18 ವರ್ಷಗಳ ಒಳಗಿರುವ ಮಕ್ಕಳ ಪಾಲನೆಯ ಹೊಣೆ ಹೊತ್ತಿರುವ ವಿಚ್ಛೇದಿತ, ವಿದುರ, ಅವಿವಾಹಿತ ನೌಕರರು 180 ದಿನಗಳಿಗೆ ಮೀರದಂತೆ ರಜೆ ಸೌಲಭ್ಯ ಪಡೆಯಬಹುದು. ರಜೆ ಮಂಜೂರು ಮಾಡುವ ಪ್ರಾಧಿಕಾರವು ಜೂನ್ 2021ರ ಸರ್ಕಾರಿ ಆದೇಶದಲ್ಲಿನ ಇತರೆ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ಮರು ಮದುವೆಯಾದರೆ ರಜೆ ಸೌಲಭ್ಯ ರದ್ದಾಗುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು, ಪುರುಷ ನೌಕರರಿಗೂ ಈ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT