ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿಚುಂಚನಗಿರಿ ಶಾಖಾ ಮಠ |ವಿದ್ಯಾವಂತರಲ್ಲಿ ವೈಚಾರಿಕ ನಿಲುವು ಅಗತ್ಯ: ಸಿದ್ದರಾಮಯ್ಯ

Published 11 ಸೆಪ್ಟೆಂಬರ್ 2023, 10:58 IST
Last Updated 11 ಸೆಪ್ಟೆಂಬರ್ 2023, 10:58 IST
ಅಕ್ಷರ ಗಾತ್ರ

ಮೈಸೂರು: 'ವಿದ್ಯಾವಂತರಾದ ಮೇಲೆ ನಮ್ಮ ನಿಲುವು ವೈಚಾರಿಕ ಆಗಿರಬೇಕು. ವಿದ್ಯೆ ಕಲಿತು ಜಾತಿವಾದಿಗಳಾದರೆ ಪ್ರಯೋಜನ ಇಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಹೆಬ್ಬಾಳಿನ ಲಕ್ಷ್ಮಿಕಾಂತಸ್ವಾಮಿ ದೇಗುಲದ ಆವರಣದಲ್ಲಿ ನಿರ್ಮಿಸಲಾದ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ನೂತನ ಕಟ್ಟಡ, ಸಾಂಸ್ಕೃತಿಕ ಭವನ ಹಾಗೂ ವಿದ್ಯಾರ್ಥಿನಿಲಯವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

'ನಾಥ ಪಂಥ ಎಂಬುದು ಜಾತಿರಹಿತ ಪಂಥ. ಅದಕ್ಕೆ ಜಾತಿ-ಧರ್ಮ ಇಲ್ಲ. ನಾವೆಲ್ಲ ಮೂಲತಃ ಮನುಷ್ಯರು. ನಂತರ ಬೆಳೆಯುತ್ತ ಜಾತಿ ವ್ಯವಸ್ಥೆ ರೂಪಿಸಿಕೊಂಡಿದ್ದು, ಅದರಿಂದ ಸಾಮಾಜಿಕ-ಆರ್ಥಿಕ ಅಸಮಾನತೆ ಇದೆ. ಅದನ್ನು ನಿರ್ಮೂಲನೆ ಮಾಡಲು ನಾಥ ಪಂಥ ಪ್ರಯತ್ನ ಮಾಡಿದೆ' ಎಂದರು.

'ಸಾವಿರಾರು ವರ್ಷಗಳಿಂದ ಶೂದ್ರ ವರ್ಗ ಅಕ್ಷರ ಸಂಸ್ಕೃತಿಯಿಂದ ವಂಚಿತ ಆಗಿದ್ದು, ಸಂವಿಧಾನವು ಅವರಿಗೆ ಶಿಕ್ಷಣವನ್ನು ಹಕ್ಕನ್ನಾಗಿ ಮಾಡಿತು.‌ ಇಂದು ಒಂದೂವರೆ ಲಕ್ಷ ವಿದ್ಯಾರ್ಥಿಗಳು ಈ ಮಠದ ಶಿಕ್ಷಣ ಸಂಸ್ಥೆಗಳಲ್ಲಿ ‌ವ್ಯಾಸಂಗ ಮಾಡುತ್ತಿರುವುದು ಖುಷಿಯ ಸಂಗತಿ' ಎಂದರು.

'ಅದೃಷ್ಟದ ಜೊತೆಗೆ ಜನರ ಪ್ರೀತಿ, ಆಶೀರ್ವಾದ ಇದ್ದರೆ ಮಾತ್ರ ರಾಜಕಾರಣದಲ್ಲಿ‌‌‌ ಬೆಳೆಯಲು, ಅಧಿಕಾರ ಗಳಿಸಲು ಸಾಧ್ಯ' ಎಂದು ನುಡಿದರು.

'ಕೆಲವರು ಮನುಷ್ಯರ ನಡುವೆ ಹುಳಿ ಹಿಂಡುವ ಪ್ರಯತ್ನ ಮಾಡುತ್ತಿದ್ದು, ಅದಕ್ಕೆ‌ ಬಲಿಯಾಗಬಾರದು.‌ ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಧರ್ಮ. ಯಾವುದರಲ್ಲಿ‌ ದಯೆ, ಪ್ರೀತಿ, ಕರುಣೆ ಇಲ್ಲವೋ ಅದು ಧರ್ಮವಲ್ಲ'
ಸಿದ್ದರಾಮಯ್ಯ, ಮುಖ್ಯಮಂತ್ರಿ

'ಇದೇ 14ರಂದು ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಬೋಧಿಸಲಾಗುವುದು' ಎಂದು‌‌ ಮಾಹಿತಿ ನೀಡಿದರು

'ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಜೊತೆಗೆ ಕೆಂಪೇಗೌಡ ಪ್ರಾಧಿಕಾರವನ್ನೂ ರಚಿಸಿದ್ದೆವು. ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಡಲಾಯಿತು" ಎಂದು ಸಿದ್ದರಾಮಯ್ಯ ವಿವರಿಸಿದರು.

ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ಬಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೃಷಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ರಮೇಶ್ ಬಾಬು ಬಂಡಿಸಿದ್ದೇಗೌಡ, ದರ್ಶನ್ ಧ್ರುವನಾರಾಯಣ,

ವಿಧಾನ‌ ಪರಿಷತ್ ಸದಸ್ಯರಾದ ಡಿ.‌ ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮರಿತಿಬ್ಬೇಗೌಡ,

ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮೇಯರ್ ಶಿವಕುಮಾರ್, ಉಪ‌ ಮೇಯರ್ ರೂಪಾ, ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಸ್ವಾಮೀಜಿ, ಭಾಷ್ಯಂ ಸ್ವಾಮೀಜಿ, ಡಿ.‌ ಮಾದೇಗೌಡ, ಕಾಂಗ್ರೆಸ್ ‌ಮುಖಂಡ ಬಿ.ಜೆ‌‌. ವಿಜಯ್ ಕುಮಾರ್, ದಿನೇಶ್ ಗೂಳಿಗೌಡ, ಸಿ.‌ಬಸವೇಗೌಡ, ಕಳಲೆ ಕೇಶವಮೂರ್ತಿ, ಎಂ.ಕೆ. ಸೋಮಶೇಖರ್, ಕಾಗಿನೆಲೆ‌ ಮೈಸೂರು ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT