ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.

ಮಾಧ್ಯಮಗಳ ಮುಂದೆ ‘ಬ್ರದರ್ ಸ್ವಾಮಿ’ ನಾಟಕವಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
.ಪ್ರಜ್ವಲ್ ರೇವಣ್ಣ ಬಗ್ಗೆ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧ ಜೆಡಿಎಸ್ ದೂರು.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ರಾಜ್ಯ ಕಾಂಗ್ರೆಸ್ ಘಟಕ, ‘ನಿಖಿಲ್ ಎಲ್ಲಿದೀಯಪ್ಪಾ’ ಎಂದಿದ್ದಾಯ್ತು. ಈಗ ಬ್ರದರ್ ಸ್ವಾಮಿಗಳು ‘ಪ್ರಜ್ವಲ್ ಎಲ್ಲಿದೀಯಪ್ಪಾ’ ಎನ್ನುತ್ತಿದ್ದಾರೆ ಎಂದು ಬರೆದುಕೊಂಡಿದೆ.

ಮಾಧ್ಯಮಗಳ ಮುಂದೆ ನಾಟಕ ಆಡುವ ಬ್ರದರ್ ಸ್ವಾಮಿಗಳಿಗೆ ಪ್ರಜ್ವಲ್ ಎಲ್ಲಿದ್ದಾನೆ, ಯಾರ ಸಖ್ಯದಲ್ಲಿದ್ದಾನೆ ಎಂಬ ಮಾಹಿತಿ ತಿಳಿದಿಲ್ಲವೇ ಎಂದು ಪ್ರಶ್ನಿಸಿದೆ.
.ಪ್ರಜ್ವಲ್ ಪಾಸ್ಪೋರ್ಟ್ ರದ್ದುಪಡಿಸಲು ಎಸ್ಐಟಿ ಪತ್ರ.
ತಿಳಿದಿಲ್ಲ ಎನ್ನುವುದು ಶತಮಾನದ ಜೋಕ್ ಎಂದಿರುವ ಕಾಂಗ್ರೆಸ್, ಬ್ರದರ್ ಸ್ವಾಮಿಗಳಿಗೆ ನಿಜಕ್ಕೂ ಕಳಕಳಿ ಇದ್ದರೆ ಎಸ್ಐಟಿಗೆ ಮಾಹಿತಿ ನೀಡಲಿ. ಇಂತಹ ನಾಟಕ ಮಾಡುವುದನ್ನು ಬಿಡಲಿ ಎಂದು ಹೇಳಿದೆ.
.ಪ್ರಜ್ವಲ್ ಬಗ್ಗೆ ಗೊತ್ತಿಲ್ಲ | ನನಗೆ ನ್ಯಾಯಾಲಯ, ದೇವರ ಮೇಲೆ ನಂಬಿಕೆ ಇದೆ: ರೇವಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.