ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಮೊಬೈಲ್ ಕರೆ ಮಾಡಿ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಶಿಡ್ಲಘಟ್ಟ ಜೆಎಂಎಫ್ಸಿ ನ್ಯಾಯಾಲಯವು ಫೆ.9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಸೋಮವಾರ ಕೇರಳದ ಮಲ್ಲಪ್ಪುರಂ ಜಿಲ್ಲೆಯ ವಾಜಿ ಕಡಬು ಎಂಬಲ್ಲಿ ರಾಜೀವ್ ಗೌಡ ಮತ್ತು ಅವರಿಗೆ ಆಶ್ರಯ ನೀಡಿದ್ದ ಮಂಗಳೂರು ಉದ್ಯಮಿ ಮೈಕಲ್ ಅವರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದರು.

ಮಂಗಳವಾರ ಶಿಡ್ಲಘಟ್ಟ ಜೆಎಂಎಫ್ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಿ.ಎಸ್. ಸುಕನ್ಯಾ ಅವರ ಎದುರು ಈ ಇಬ್ಬರನ್ನು ಹಾಜರುಪಡಿಸಲಾಯಿತು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮೈಕಲ್ಗೆ ಜಾಮೀನು ಮಂಜೂರು ಮಾಡಿದರು. ರಾಜೀವ್ ಗೌಡ ಅವರನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಿದರು.

ಜಾಮೀನಿಗೆ ಸಂಬಂಧಿಸಿದಂತೆ ತಕರಾರು ಅರ್ಜಿ ಸಲ್ಲಿಸಲು ಸರ್ಕಾರಿ ಅಭಿಯೋಜಕರಿಗೆ ಬುಧವಾರ (ಜ.28)ದವರೆಗ ನ್ಯಾಯಾಲಯವು ಕಾಲಾವಕಾಶ ನೀಡಿದೆ.

ರಾಜೀವ್ ಗೌಡ ಪರ ವಿವೇಕ್ ಸುಬ್ಬಾರೆಡ್ಡಿ, ಸರ್ಕಾರದ ಪರ ಮಹಮ್ಮದ್ ಖಾಜಾ ವಾದ ಮಂಡಿಸಿದರು.
.ಚಿಕ್ಕಬಳ್ಳಾಪುರ: ಪೊಲೀಸ್ ಅತಿಥಿ ಗೃಹದಲ್ಲಿ ರಾಜೀವ್ ಗೌಡ ವಿಚಾರಣೆ.ಪೌರಾಯುಕ್ತೆಗೆ ನಿಂದನೆ: ಕೇರಳದಿಂದ ಗೋವಾಕ್ಕೆ ತೆರಳುವಾಗ ರಾಜೀವ್ ಗೌಡ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.