ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ಮುಂದುವರಿದ ವರ್ಷಧಾರೆ: 19 ಕೆರೆಗಳು ಭರ್ತಿ

ಚಿಕ್ಕಮಗಳೂರಿನ ಹರಹರಿದಹಳ್ಳಿಯಲ್ಲಿ ಜಲಪೂರಣ * ತುಮಕೂರಿನಲ್ಲಿ ಕೋಡಿ ಹರಿದ ಕೆರೆ
Published 7 ಜೂನ್ 2024, 16:09 IST
Last Updated 7 ಜೂನ್ 2024, 16:09 IST
ಅಕ್ಷರ ಗಾತ್ರ

ಚಿಕ್ಕಮಗಳೂರು/ತುಮಕೂರು: ರಾಜ್ಯದಲ್ಲಿ ವರ್ಷಧಾರೆ ಮುಂದುವರಿದೆ. ಕೆರೆ ಕಟ್ಟೆಗಳು ಭರ್ತಿಯಾಗಿ, ಕೃಷಿ ಚಟುವಟಿಕೆ ಚುರುಕು ಪಡೆದಿರುವಂತೆಯೇ, ಜಮೀನುಗಳು ಜಲಾವೃತವಾಗಿರುವ ಹಾಗೂ ರಸ್ತೆ ಕೊಚ್ಚಿಹೋಗಿರುವ ಘಟನೆಗಳು ವರದಿಯಾಗಿವೆ.

ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಗುರುವಾರ ರಾತ್ರಿಯೂ ಮಳೆಯಾಗಿದ್ದು, ಕೆರೆಕಟ್ಟೆಗಳು ತುಂಬಿವೆ. ಚಿಕ್ಕಮಗಳೂರು ತಾಲ್ಲೂಕಿನ ಹರಿಹರದಹಳ್ಳಿ ವ್ಯಾಪ್ತಿಯಲ್ಲಿ ಎರಡೇ ದಿನದಲ್ಲಿ 19 ಕೆರೆಗಳು ಭರ್ತಿಯಾಗಿವೆ.

ಮೂಡಿಗೆರೆ, ಕೊಟ್ಟಿಗೆಹಾರ, ಕಳಸಾಪುರ, ಚಿಕ್ಕಮಗಳೂರು ತಾಲ್ಲೂಕಿನ ಜೋಳದಾಳ ಮತ್ತು ದಾಸರಹಳ್ಳಿ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಕಳೆದ ವರ್ಷ ಅಂತರ್ಜಲ ಕುಸಿದು ತೊಂದರೆ ಅನುಭವಿಸಿದ್ದ ಕೃಷಿಕರಿಗೆ ಸಮಾಧಾನ ತಂದಿದೆ.

ಕೋಡಿ ಹರಿದ ಕೆರೆಗಳು:

ತುಮಕೂರು ವರದಿ: ಜಿಲ್ಲೆಯಾದ್ಯಂತ ವಿವಿಧೆಡೆ ಗುರುವಾರ, ಶುಕ್ರವಾರ ಉತ್ತಮ ಮಳೆಯಾಗಿದೆ. ಕೊರಟಗೆರೆ ಪಟ್ಟಣದ ಹೊರವಲಯದ ಜಂಪೇನಹಳ್ಳಿ ಕೆರೆ ಶುಕ್ರವಾರ ಬೆಳಿಗೆ ಕೋಡಿ ಹರಿದಿದೆ. ನೋಡಲು ನೂರಾರು ಜನ ಕೆರೆ ಬಳಿ ಸೇರಿದ್ದರು. ತೋವಿನಕೆರೆ ಹೋಬಳಿ ಬುಕ್ಕಪಟ್ಟಣ ಹೊಸಕೆರೆ, ಹಳೆಕೆರೆ ಕೋಡಿ ಹರಿಯುತ್ತಿದೆ. ಕೃಷಿ ಚಟುವಟಿಕೆ ಗರಿಗೆದರಿದೆ.

ಕೋಲಾರ ವರದಿ: ಬಂಗಾರಪೇಟೆ ಹಾಗೂ ಕೆಜಿಎಫ್‌ ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಪರಿತಪಿಸಿದರು. 

ದಾವಣಗೆರೆ ವರದಿ: ಜಿಲ್ಲೆಯಲ್ಲಿ ನಗರ ಹಾಗೂ ಹರಿಹರ, ಚನ್ನಗಿರಿ, ನ್ಯಾಮತಿ ಭಾಗದಲ್ಲಿ ಸಾಧಾರಣ, ಮಲೇಬೆನ್ನೂರು ಕಡೆ ಉತ್ತಮ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿವೆ. ನಗರದಲ್ಲಿ ತಗ್ಗು ಪ್ರದೇಶಗಳ ನಿವಾಸಿಗಳು ಪರಿಪಾಟಲು ಮುಂದುವರಿದಿದೆ. 

32 ಮನೆಗಳಿಗೆ ಹಾನಿ 

ಚಿತ್ರದುರ್ಗ ವರದಿ: ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಉತ್ತಮ ಮಳೆಯಾಗಿದೆ. 32 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ತೋಟಗಾರಿಕೆ ಬೆಳೆ ಹಾಳಾಗಿದೆ.

ಚಿತ್ರದುರ್ಗ ತಾಲ್ಲೂಕು ಬೆಳಗಟ್ಟ ಗ್ರಾಮದ ಬಳಿ ರಸ್ತೆ ಜಲಾವೃತಗೊಂಡು ಖಾಸಗಿ ಬಸ್‌ ನೀರಿನಲ್ಲಿ ಕೆಲ ಕಾಲ ಸಿಲುಕಿ ಆತಂಕ ಮೂಡಿತ್ತು. ತಾಲ್ಲೂಕಿನ ರಾಂಪುರ, ದೇವಸಮುದ್ರ, ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಭಾಗದಲ್ಲಿ ಉತ್ತಮ ಮಳೆಯಾಗಿದೆ.  

ಮಡಿಕೇರಿಯಲ್ಲಿ ಬಿರುಸಿನ ಮಳೆ
ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ಬಿರುಸಿನಿಂದ ಮಳೆ ಸುರಿಯಿತು.  ವಿರಾಜಪೇಟೆ, ಕುಶಾಲನಗರ ಹಾಗೂ ನಾಪೋಕ್ಲು ಭಾಗಗಳಲ್ಲೂ ಸಾಧಾರಣ ಮಳೆಯಾಗಿದೆ.

ಮಳೆ: ಎಲ್ಲಿ ಎಷ್ಟು? (ಸೆಂ.ಮೀಗಳಲ್ಲಿ)

ಕೋಲಾರ ಜಿಲ್ಲೆ ಚಿನ್ನಕೋಟೆ; 10.4 ಕ್ಯಾಸಂಬಳ್ಳಿ;9.3 ದೊಡ್ಡೂರು ಕರಪನಹಳ್ಳಿ; 7.3 ಎನ್‌.ಜಿ.ಹುಲ್ಕೂರು;6.5 ಮಾವಳ್ಳಿ;6.6 ತುಮಕೂರು ಜಿಲ್ಲೆ ನೆಲಹಾಳ್‌;09 ಹೊಳವನಹಳ್ಳಿ;08 ಇರಕಸಂದ್ರ;06 ಅಂಕಸಂದ್ರ;05 ಚಿತ್ರದುರ್ಗ ಜಿಲ್ಲೆ ರಾಯಾಪುರ;08 ತುರವನೂರು;07 ವಿಜಯಪುರ ಜಿಲ್ಲೆ ವಿಜಯಪುರ ನಗರ;12 ತಾಳಿಕೋಟೆ ಪಟ್ಟ;11.9

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT