ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಹೊಸದಾಗಿ 213 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಇಬ್ಬರು ಮೃತಪಟ್ಟಿದ್ದಾರೆ. 56 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟು ಸೋಂಕಿತ 7,213 ಮಂದಿಯ ಪೈಕಿ 4,135 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 2,987 ಜನರಲ್ಲಿ ಮಾತ್ರ ಸೋಂಕು ಇದೆ. ಈವರೆಗೆ ಕೋವಿಡ್ನಿಂದಾಗಿ ಮೃತಪಟ್ಟವರ ಸಂಖ್ಯೆ ಒಟ್ಟು 88ಕ್ಕೆ ಏರಿದೆ.

ಧಾರವಾಡದಲ್ಲಿ ಜೂನ್ 14ರಂದು ಆಸ್ಪತ್ರೆಗೆ ದಾಖಲಾಗಿದ್ದ 65 ವರ್ಷದ ವ್ಯಕ್ತಿ ಅದೇ ದಿನ ಮೃತಪಟ್ಟಿದ್ದಾರೆ. ಅವರು 6,222ನೇ ರೋಗಿಯ ಸಂಪರ್ಕಕ್ಕೆ ಬಂದಿದ್ದರು. ಬೆಂಗಳೂರು ನಗರದಲ್ಲಿ 75 ವರ್ಷದ ವೃದ್ಧೆಯೊಬ್ಬರು ಶೀತಜ್ವರ ಲಕ್ಷಣದೊಂದಿಗೆ (ಐಎಲ್ಐ) ಜೂನ್ 13ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಸೋಮವಾರ ಮೃತಪಟ್ಟರು.

ಹೊಸದಾಗಿ ಸೋಂಕಿತರಾದವರ ಪೈಕಿ 103 ಮಂದಿ ಅನ್ಯ ರಾಜ್ಯಗಳಿಂದ ಬಂದವರು ಹಾಗೂ 23 ಮಂದಿ ಹೊರ ದೇಶಗಳಿಂದ ಬಂದವರು. ಕಲಬುರ್ಗಿಯಲ್ಲಿ 48, ಬೆಂಗಳೂರಿನಲ್ಲಿ 35, ಧಾರವಾಡದಲ್ಲಿ 34, ದಕ್ಷಿಣ ಕನ್ನಡದಲ್ಲಿ 23, ರಾಯಚೂರಿನಲ್ಲಿ 18, ಯಾದಗಿರಿಯಲ್ಲಿ 13, ಬೀದರ್ನಲ್ಲಿ 11, ಬಳ್ಳಾರಿಯಲ್ಲಿ 10, ಕೊಪ್ಪಳದಲ್ಲಿ 4, ವಿಜಯಪುರ. ಶಿವಮೊಗ್ಗ, ಬಾಗಲಕೋಟೆಗಳಲ್ಲಿ ತಲಾ 3, ಉಡುಪಿ, ಹಾವೇರಿ, ರಾಮನಗರಗಳಲ್ಲಿ ತಲಾ 2 ಹಾಗೂ ಹಾಸನ, ದಾವಣಗೆರೆಯಲ್ಲಿ ತಲಾ ಒಂದು ಪ್ರಕರಣಗಳು ದೃಢಪಟ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.