ಕಲಬುರ್ಗಿ: ಜಿಲ್ಲೆಯಲ್ಲಿ ಸೋಮವಾರ ಮತ್ತೆ ನಾಲ್ವರಿಗೆ ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡಿದ್ದು, ಇವರ ರಕ್ತ ಹಾಗೂ ಕಫದ ಮಾದರಿಯನ್ನು ಬೆಂಗಳೂರು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ನಾಲ್ವರಲ್ಲಿ ಇಬ್ಬರು ಈಚೆಗೆ ಕೋವಿಡ್- 19ನಿಂದಲೇ ಮೃತಪಟ್ಟಮೊಹಮ್ಮದ್ಹುಸೇನ್ ಸಿದ್ದಿಕಿ (76) ಅವರ ಸಂಪರ್ಕದಲ್ಲಿ ಇದ್ದವರು. ಇನ್ನಿಬ್ಬರು ವಿದೇಶಗಳಿಂದ ಇಲ್ಲಿಗೆ ಬಂದವರು. ನಾಲ್ವರನ್ನೂ ಇಎಸ್‌ಐ ಆಸ್ಪತ್ರೆಯಲ್ಲಿ ತೆರೆದಿರುವ ಪ್ರತ್ಯೇಕವಾರ್ಡ್‌ಗೆ ದಾಖಲಿಸಲಾಗಿದೆ. ಇದರೊಂದಿಗೆ ನಗರದಲ್ಲಿ ಈ ವಿಶೇಷ ವಾರ್ಡ್‌ಗೆ ದಾಖಲಾದವರ ಸಂಖ್ಯೆ 8ಕ್ಕೆ ಏರಿದೆ.

‘ಒಬ್ಬ ವ್ಯಕ್ತಿಯನ್ನು ಚಿತ್ತಾಪುರದಲ್ಲಿ ಪತ್ತೆ ಮಾಡಿದ್ದು, ಅವರು ದುಬೈನಿಂದ ಈಚೆಗೆ ಮರಳಿದ್ದಾರೆ. ಇನ್ನೊಬ್ಬರು ಚಿಂಚೋಳಿಯಲ್ಲಿ ವಾಸವಾಗಿದ್ದ ವಾರದ ಹಿಂದಷ್ಟೇ ಸೌದಿ ಅರೇಬಿಯಾದಿಂದ ಬಂದಿದ್ದಾರೆ. ಈ ಇಬ್ಬರನ್ನೂ ಪ್ರಾಥಮಿಕ ತಪಾಸಣೆಗೆ ಒಳಪಡಿಸಿದ್ದು, ಸೋಂಕು ತಗುಲಿರುವ ಸಾಧ್ಯತೆ ಇರುವುದರಿಂದ ತೀವ್ರ ನಿಗಾ ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಬಿ.ಶರತ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಮೃತಪಟ್ಟಮೊಹಮ್ಮದ್ ಹುಸೇನ್ ಸಿದ್ದಿಕಿ ಅವರ ನೇರ ಸಂಪರ್ಕದಲ್ಲಿದ್ದ ಒಟ್ಟು 71 ಮಂದಿಯನ್ನು ಈವರೆಗೆ ಗುರುತಿಸಿದ್ದು, ಎಲ್ಲರನ್ನೂ ಅವರ ಮನೆಯಲ್ಲೇ ಪ್ರತ್ಯೇಕವಾಗಿಟ್ಟು ನಿಗಾ ವಹಿಸಲಾಗಿದೆ.ಇವರಲ್ಲಿ ಇಬ್ಬರಿಗೆ ಶೀತ, ಜ್ವರ, ಕೆಮ್ಮು ಮುಂತಾದ ಲಕ್ಷಣಗಳು ಕಂಡುಬಂದಿದ್ದು, ಸೋಮವಾರ ಇಎಸ್‌ಐ ಆಸ್ಪತ್ರೆಯ ವಿಶೇಷ ವಾರ್ಡ್‌ಗೆ ದಾಖಲಿಸಲಾಯಿತು ಎಂದರು.

ಪ್ರತ್ಯೇಕವಾಗಿರಿಸಿರುವಎಲ್ಲ 71 ಮಂದಿಯ ಚಲನವಚಲನಗಳನ್ನೂ ದಾಖಲಿಸಿಕೊಂಡಿದ್ದು, ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದ 238 ಜನರನ್ನುಪತ್ತೆ ಮಾಡಲಾಗಿದೆ. ಎಲ್ಲರನ್ನೂ ಅವರ ಮನೆಯಲ್ಲಿ ಇರಿಸಿ, ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಸೋಮವಾರದ ಹೊತ್ತಿಗೆ ಒಟ್ಟು 370 ಮಂದಿಯನ್ನು ಹೋಂ ಕೊರೊಂಟೈನ್ (ಮನೆಯಲ್ಲೇ ಇರಿಸಿ ನಿಗಾ ವಹಿಸುವುದು) ಮಾಡಲಾಗಿದೆ.

ಮೃತಪಟ್ಟ ವೃದ್ಧನ ಕುಟುಂಬದ ನಾಲ್ವರು ಶಂಕಿತರಲ್ಲಿ ಮೂವರ ಮಾದರಿ ಋಣಾತ್ಮಕವಾಗಿಬಂದಿದ್ದು, ಒಬ್ಬರಲ್ಲಿಮಾತ್ರ ಕೋವಿಡ್–19 ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಮುಂದುವರಿದಿದೆ. ಉಳಿದ ಮೂವರನ್ನೂ ಕೂಡಪ್ರತ್ಯೇಕ ವಾರ್ಡ್‌ಗಳಲ್ಲೇ ಇರಿಸಿ, ಇನ್ನೂ ನಿಗಾ ವಹಿಸಿದ್ದೇವೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.