ಚಿತ್ರದುರ್ಗ: ಹತ್ತಿ ಬೆಲೆ ನಿರಂತರವಾಗಿ ಏರಿಕೆ ಆಗುತ್ತಲೇ ಇದ್ದು, ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಂಗಳವಾರ ಒಂದು ಕ್ವಿಂಟಲ್ ಹತ್ತಿ ₹ 16,061ಕ್ಕೆ ಮಾರಾಟವಾಗಿದೆ. ಇದು ಈವರೆಗಿನ ಸಾರ್ವಕಾಲಿಕ ದಾಖಲೆಯ ದರವಾಗಿದೆ.

ಬೆಲೆ ಏರಿಕೆಯ ಬೆನ್ನಲ್ಲೇ ಹತ್ತಿ ಆವಕವೂ ಹೆಚ್ಚುತ್ತಿದೆ. ಮಂಗಳವಾರ 4,170 ಚೀಲ ಹತ್ತಿ ಮಾರುಕಟ್ಟೆಗೆ ಬಂದಿದೆ. ಸರಾಸರಿ ₹11,690 ಬೆಲೆ ಸಿಕ್ಕಿದೆ. ಡಿಸಿಎಚ್ ಮತ್ತು ಬನ್ನಿ ತಳಿಯ ಹತ್ತಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರು ಹರ್ಷಗೊಂಡಿದ್ದಾರೆ.

ಚಿತ್ರದುರ್ಗ ಎಪಿಎಂಸಿಯಲ್ಲಿ ದಿನ ಬಿಟ್ಟು ದಿನ ಹತ್ತಿ ಮಾರುಕಟ್ಟೆ ನಡೆಯುತ್ತದೆ. ದಾವಣಗೆರೆ, ತುಮಕೂರು ಹಾಗೂ ಆಂಧ್ರಪ್ರದೇಶದ ಹಲವು ಭಾಗಗಳಿಂದಲೂ ಇಲ್ಲಿಗೆ ಹತ್ತಿ ಬರುತ್ತದೆ. ದೇಶದ ಹಲವೆಡೆ ಅತಿವೃಷ್ಟಿಗೆ ಹತ್ತಿ ಬೆಳೆ ಹಾಳಾಗಿರುವ ಪರಿಣಾಮ ಉತ್ಪಾದನೆಯಲ್ಲಿ ಕುಸಿತವಾಗಿದೆ.

2020ರಲ್ಲಿ ಹತ್ತಿಗೆ ಗರಿಷ್ಠ ₹ 8 ಸಾವಿರ ದರ ಸಿಕ್ಕಿತ್ತು. 2021ರ ಮಾರ್ಚ್ ತಿಂಗಳಲ್ಲಿ ಕ್ವಿಂಟಲ್ ಹತ್ತಿ ₹ 8,833ಕ್ಕೆ ಮಾರಾಟವಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಈ ಬೆಲೆ ₹ 13 ಸಾವಿರಕ್ಕೆ ತಲುಪಿತ್ತು. ಆಗಸ್ಟ್ ಮೊದಲ ವಾರವೂ ಹತ್ತಿ ದರದಲ್ಲಿ ಏರಿಕೆ ಆಗುತ್ತಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.