ಬೆಂಗಳೂರು: ಕೋವಿಡ್ ಪೀಡಿತರ ಜತೆಗೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿರುವವರು ಕೂಡ ಪ್ರತ್ಯೇಕ ವಾಸ ಮಾಡುವ ಜತೆಗೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ವರದಿಯಾದ ಪ್ರಾರಂಭಿಕ ದಿನಗಳಲ್ಲಿ ಕೊರೊನಾ ಸೋಂಕು ಶಂಕೆ ಇರುವವರು ಹಾಗೂ ರೋಗಿಗಳೊಂದಿಗೆ ಸಂಪರ್ಕ ಹೊಂದಿರುವವರನ್ನು ಕ್ವಾರಂಟೈನ್ ಕೇಂದ್ರಗಳಿಗೆ ದಾಖಲಿಸಿ, ಅವರ ಮೇಲೆ 14 ದಿನಗಳ ಕಾಲ ನಿಗಾ ಇಡಲಾಗುತ್ತಿತ್ತು. ಮನೆಗೆ ತೆರಳಿದ ಬಳಿಕವೂ ಮತ್ತೆ 14 ದಿನಗಳು ಮನೆಯಲ್ಲಿಯೇ ಪ್ರತ್ಯೇಕವಾಗಿ ಕ್ವಾರಂಟೈನ್‌ಗೆ ಒಳಗಾಗಬೇಕಾಗಿತ್ತು. ಪ್ರಕರಣಗಳ ಸಂಖ್ಯೆ ಏರುಗತಿ ಪಡೆದ ಬಳಿಕ ಆರೋಗ್ಯ ಇಲಾಖೆಯು ಕ್ವಾರಂಟೈನ್ ನಿಯಮಗಳನ್ನು ಸಡಿಲಿಸಿ, ಸಾಂಸ್ಥಿಕ ಕ್ವಾರಂಟೈನ್ ಕೈಬಿಟ್ಟಿದೆ. ಬದಲಾಗಿ ಮನೆಯಲ್ಲಿಯೇ 14 ದಿನಗಳವರೆಗೆ ಕ್ವಾರಂಟೈನ್‌ಗೆ ಒಳಗಾಗಲು ಸೂಚಿಸಿದೆ.

ಕೋವಿಡ್ ಪೀಡಿತ ವ್ಯಕ್ತಿಯ ಜತೆಗೆ ವಾಸವಿರುವವರನ್ನು ಸಂಪರ್ಕಿತರು ಎಂದು ಗುರುತಿಸಲಾಗುತ್ತಿದೆ. ವ್ಯಕ್ತಿಯೊಂದಿಗೆ ಕಚೇರಿ ಸೇರಿದಂತೆ ವಿವಿಧೆಡೆ ಸುರಕ್ಷತೆ ಇಲ್ಲದೆಯೇ ಹೆಚ್ಚಿನ ಸಮಯ ಕಳೆದವರು ಕೂಡ ಸಂಪರ್ಕಿತರಾಗಿರುತ್ತಾರೆ. 1 ಮೀಟರ್‌ಗಿಂತ ಕಡಿಮೆ ದೂರದಲ್ಲಿ ಕುಳಿತು ಪ್ರಯಾಣ ಮಾಡಿದವರನ್ನುಸಂಪರ್ಕಿತರು ಎಂದು ಪರಿಗಣಿಸಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕಿತರ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.

ಸೋಂಕು ತಗಲುವ ಸಾಧ್ಯತೆಗಳು

* ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಸೋಂಕಿತ ವ್ಯಕ್ತಿಯೊಂದಿಗೆ ಒಂದೇ ಮನೆಯಲ್ಲಿ ವಾಸ

* ಸೋಂಕು ಇರುವ ವ್ಯಕ್ತಿಯ ದೇಹದಿಂದ ಹೊರಹೊಮ್ಮುವ ದ್ರವಗಳನ್ನು ಸ್ಪರ್ಶಿಸುವುದು

*ವಿಮಾನ, ಬಸ್ ಹಾಗೂ ರೈಲುಗಳಲ್ಲಿ ಸೀಟುಗಳ ನಡುವೆ ಅಂತರ ಕಾಯ್ದುಕೊಳ್ಳದಿರುವುದು

*ದೇವಾಲಯ, ಮಸೀದಿ, ಚರ್ಚ್ ಮತ್ತು ಇತರ ಧಾರ್ಮಿಕ ಸ್ಥಳಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದು

* ಮೂರು ಅಡಿಗಿಂತ ಹತ್ತಿರದಲ್ಲಿ ಸೋಂಕಿತ ವ್ಯಕ್ತಿಯೊಂದಿಗೆ 6 ಗಂಟೆಗೂ ಹೆಚ್ಚು ಸಮಯ ಪ್ರಯಾಣ ಮಾಡುವುದು

ವಿಶೇಷ ನಿಗಾ ಅಗತ್ಯ

*60 ವರ್ಷ ಮೇಲ್ಪಟ್ಟವರು

* ಗರ್ಭಿಣಿ ಹಾಗೂ ಬಾಣಂತಿಯರು

*10 ವರ್ಷದೊಳಗಿನ ಮಕ್ಕಳು

* ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಕಾಯಿಲೆ ಇರುವವರು

ಕೋವಿಡ್: ಐದು ಸೂತ್ರಗಳು

* ಜನಸಂದಣಿ ಇರುವ ಪ್ರದೇಶದಿಂದ ದೂರ ಇರುವುದು

* ಶೀತ, ಕೆಮ್ಮು ಸೇರಿದಂತೆ ವಿವಿಧ ಸಮಸ್ಯೆ ಇರುವವರಿಂದ ಅಂತರ ಕಾಯ್ದುಕೊಳ್ಳುವುದು

* ಸೀನುವಾಗ, ಕೆಮ್ಮುವಾಗ ಮೂಗು ಮತ್ತು ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುವುದು

* ಸೋಪು ಹಾಗೂ ಸ್ಯಾನಿಟೈಸರ್‌ನಿಂದ ಕೈಗಳನ್ನು ಆಗಾಗ ಸ್ವಚ್ಫ ಪಡಿಸಿಕೊಳ್ಳುವುದು

* ಲಕ್ಷಣಗಳು ಕಾಣಿಸಿಕೊಂಡಾಗ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.