ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 5030 ಕೋವಿಡ್–19 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 80863ಕ್ಕೆ ಏರಿಕೆಯಾಗಿದೆ.
ಇದೇ ವೇಳೆ ಇಂದು ಒಟ್ಟು 97 ಮಂದಿ ಕೋವಿಡ್ನಿಂದಾಗಿ ಸಾವಿಗೀಡಾಗಿದ್ದು, ರಾಜ್ಯದಲ್ಲಿ ಈ ವರೆಗೆ ಕೊರೊನಾ ವೈರಸ್ ಸೋಂಕಿಗೆ ಪ್ರಾಣತೆತ್ತವರ ಸಂಖ್ಯೆ 1616ಕ್ಕೆ ಏರಿದೆ.
ಇನ್ನು ಬೆಂಗಳೂರಿನಲ್ಲಿ ಇಂದು 2207 ಪ್ರಕರಣಗಳು ಪತ್ತೆಯಾಗಿವೆ. ಒಟ್ಟಾರೆ ಸೋಂಕಿತರ ಸಂಖ್ಯೆ ಗುರುವಾರದ ಹೊತ್ತಿಗೆ 39200 ಆಗಿದೆ.
ಒಟ್ಟಾರೆ 80863 ಸೋಂಕು ಪ್ರಕರಣಗಳಲ್ಲಿ ಸದ್ಯ ರಾಜ್ಯದಲ್ಲಿ ಸಕ್ರೀಯವಾಗಿರುವುದು 49931 ಪ್ರಕರಣಗಳು ಮಾತ್ರ. ಇನ್ನುಳಿದಂತೆ 29310 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ರಾಜ್ಯದಲ್ಲಿ ಒಟ್ಟು 2071 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
Karnataka conducted 27,773 tests in a single day today. So far we conducted 11,40,647 tests across 88 labs in the state. 5,030 Covid positive cases have been reported in the state today & 2,071 recoveries. 2,207 new cases reported in Bengaluru & 1,038 recoveries.@CMofKarnatakapic.twitter.com/pSwwRXWskm
Karnataka reports 5030 new #COVID19 positive cases of which 2207 cases are from Bengaluru Urban. Total number of cases now at 80863 and death toll rises to 1616 after 97 deaths were reported today: State Health Department pic.twitter.com/zplXToWFEV