ರಾಯಚೂರು: 'ಎರಡು ದಿನಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ ಕೂಡಾ ಆರಂಭವಾಗಲಿವೆ. ಶೇ 15 ರಷ್ಟು ದರ ಏರಿಕೆಗೆ ಅವಕಾಶ ನೀಡಲಾಗಿದೆ' ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

'ಈ ಸಂಬಂಧ ಖಾಸಗಿ ವಾಹನಗಳ ಮಾಲೀಕರ ಸಂಘದೊಂದಿಗೆ ಸಭೆ ನಡೆದಿದ್ದು, ಶೇ 50 ದರ ಏರಿಕೆ ಬೇಡಿಕೆ ತಿರಸ್ಕರಿಸಲಾಗಿದೆ. ಸೋಂಕು ತಡೆಯಲು ಸರ್ಕಾರಿ ಬಸ್‌ಗಳಲ್ಲಿ ಅನುಸರಿಸುವ ಎಲ್ಲಾ ನಿಯಮಗಳನ್ನು ಖಾಸಗಿ ಬಸ್‌ಗಳಲ್ಲಿಯೂ ಅನುಸರಿಸಬೇಕು. ಕೆಂಪು ವಲಯ ಹಾಗೂ ಬಫರ್ ಜೋನ್ ಪ್ರದೇಶಗಳ ಪ್ರಯಾಣಿಕರನ್ನು ಕರೆದೊಯ್ಯದಂತೆ ತಿಳಿಸಲಾಗಿದೆ' ಎಂದರು.

'ಸೇವಾ ಮನೋಭಾವ ಇಟ್ಟುಕೊಂಡು ನಷ್ಟವಾದರೂ ಸರ್ಕಾರಿ ಬಸ್ ಸಂಚಾರ ಆರಂಭಿಸಿದ್ದೇವೆ. ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿಗೆ ಅವಕಾಶ ನೀಡುವುದಿಲ್ಲ' ಎಂದು ಹೇಳಿದರು.

ಶುಕ್ರವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.