ಬೆಂಗಳೂರು: ‘ಸಾರಿಗೆ ನೌಕರರ ಮುಷ್ಕರದ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಿರುವ ರಾಜ್ಯ ಬಿಜೆಪಿ ಸರ್ಕಾರದ ಧೋರಣೆ ಖಂಡನೀಯ’ ಎಂದುಭಾರತ ಕಮ್ಯೂನಿಸ್ಟ್ ಪಕ್ಷದ (ಮಾಕ್ಸ್೯ವಾದಿ) ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ಖಂಡನೆ ವ್ಯಕ್ತಪಡಿಸಿವೆ.

‘ಸಾರಿಗೆ ಮುಷ್ಕರವನ್ನು ನಿಷೇಧಿಸಿ ದಮನಕಾರಿ ಧೋರಣೆಯನ್ನು ಸರ್ಕಾರ ಮುಂದುವರಿಸಿದೆ. ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ತೋರಿದೆ. ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದುದಕ್ಷಿಣ ಜಿಲ್ಲಾ ಸಮಿತಿಕಾಯ೯ದಶಿ೯ ಕೆ.ಎನ್.ಉಮೇಶ್ ಆಗ್ರಹಿಸಿದ್ದಾರೆ.

‘ಸರ್ಕಾರ ಸಾರಿಗೆ ನೌಕರರ ಪ್ರತಿನಿಧಿಗಳ ಜೊತೆ ಚರ್ಚಿಸಿ, ಸೌಹಾರ್ದಯುತ ಪರಿಹಾರದ ಹಾದಿಯನ್ನು ಅನುಸರಿಸಬೇಕಿತ್ತು. ಅದರ ಬದಲು ಮುಷ್ಕರ ನಿಷೇಧ, ವಸತಿ ಗೃಹಗಳ ತೆರವು, ಖಾಸಗಿ ಬಸ್ಗಳಿಗೆ ಅವಕಾಶ, ಎಸ್ಮಾ ಜಾರಿ ಬೆದರಿಕೆಗಳನ್ನು ಒಡ್ಡಿದೆ. ಇದು, ಬಿಜೆಪಿ ಸರ್ಕಾರವು ಸರ್ಕಾರಿ ಸಾರಿಗೆಯನ್ನು ಖಾಸಗೀಕರಣ ಮಾಡಲು ನಡೆಸಿರುವ ಹುನ್ನಾರ’ ಎಂದು ದೂರಿದ್ದಾರೆ.

ಉತ್ತರ ಜಿಲ್ಲಾ ಸಮಿತಿ ಕಾಯ೯ದಶಿ೯ಎನ್.ಪ್ರತಾಪ್ ಸಿಂಹ,‘ರಾಜ್ಯದ ಜನತೆ ಸಾರಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಸಕಾ೯ರ ಸಾರ್ವಜನಿಕರನ್ನು ನೌಕರರ ವಿರುದ್ಧ ಎತ್ತಿ ಕಟ್ಟಿ, ತನ್ನ ದುರಾಡಳಿತ ಮರೆಮಾಚುವ ರಾಜಕೀಯದಲ್ಲಿ ತೊಡಗಿದೆ. ಇದನ್ನು ಜನರು ಅರ್ಥಮಾಡಿಕೊಂಡು ನೌಕರರಪರ ನಿಲ್ಲಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.