ಬೆಂಗಳೂರು: ‘ದೆಹಲಿ ಸ್ಫೋಟದ ರೂವಾರಿಗಳು ಅನಕ್ಷರಸ್ಥರಲ್ಲ, ಅವರಲ್ಲಿ ಬಹುತೇಕರು ವೈದ್ಯರು. ಹಲವು ಭಯೋತ್ಪಾದನಾ ಪ್ರಕರಣಗಳಲ್ಲಿ ಎಂಜಿನಿಯರ್ಗಳು, ಶ್ರೀಮಂತ ಕುಟುಂಬಗಳ ಹಿನ್ನೆಲೆ ಇರುವವರೂ ಇದ್ದಾರೆ. ಭಯೋತ್ಪಾದಕರನ್ನು ತಯಾರಿಸುವ ಸಾಫ್ಟ್ವೇರ್ ಯಾವುದು’ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಮಾಯಕರನ್ನು ಕೊಲ್ಲುವುದನ್ನು ಇಸ್ಲಾಂ ಒಪ್ಪುವುದಿಲ್ಲ. ಹೀಗೆ ಕೊಲ್ಲುವವರು ನಿಜವಾದ ಮುಸಲ್ಮಾನರಲ್ಲ ಎಂದು ಒಬ್ಬರು ಮೌಲ್ವಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ನಿಜ ಆಗಿದ್ದರೆ ಭಯೋತ್ಪಾದನೆ ಏಕೆ ನಡೆಯುತ್ತಿತ್ತು? ಆದರೆ ಇವರೆಲ್ಲರೂ ಭಯೋತ್ಪಾದನೆ ಮಾಡುತ್ತಿರುವುದೇ ಇಸ್ಲಾಂ ವಿಸ್ತರಣೆಗಾಗಿ’ ಎಂದರು.

‘ಭಾರತದಲ್ಲಿ ಇರುವಷ್ಟು ಧಾರ್ಮಿಕ ಸ್ವಾತಂತ್ರ್ಯ ಬೇರೆ ಯಾವುದೇ ದೇಶದಲ್ಲೂ ಇಲ್ಲ. ಇಲ್ಲಿ ಗಣೇಶನ ಮೆರವಣಿಗೆಯನ್ನು ಆತಂಕದಲ್ಲಿ ನಡೆಸಬೇಕಾಗುತ್ತದೆ. ಆದರೆ, ಈದ್ ಮಿಲಾದ್ ಯಾವತ್ತೂ ಆತಂಕದಲ್ಲಿ ನಡೆದಿಲ್ಲ. ಆದರೂ ಬಾಂಬ್ ಇಡಬೇಕೆಂದು ಅವರಿಗೆ ಹೇಗೆ ಅನಿಸುತ್ತದೆ’ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.