ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲೆ ಪ್ರಕರಣದಿಂದ ಪಾರಾಗಲು ದರ್ಶನ್‌ ಕೋಟಿ ಕೋಟಿ ಆಮಿಷ?

Published 13 ಜೂನ್ 2024, 19:50 IST
Last Updated 13 ಜೂನ್ 2024, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ಚಿತ್ರದುರ್ಗದ ರೇಣುಕಸ್ವಾಮಿ ಮರ್ಮಾಂಗಕ್ಕೆ ಹಲವು ಬಾರಿ ಒದ್ದು ಕೊಲೆ ಮಾಡಿದ್ದ ಆರೋಪ ಹೊತ್ತಿರುವ ನಟ ದರ್ಶನ್ ಮತ್ತು ಆತನ ಸಹಚರರು ಕೊಲೆ ಪ್ರಕರಣದಿಂದ ಪಾರಾಗಲು ಹಲವರಿಗೆ ಕೋಟಿ ಕೋಟಿ ರೂಪಾಯಿ ಆಮಿಷ ಒಡ್ಡಿದ್ದರು’ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಆರೋಪಿಗಳನ್ನು ಕಸ್ಟಡಿಗೆ ಪಡೆದು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ನಾನಾ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ವಿಚಾರಣೆ ವೇಳೆ ಅನೇಕ ಮಾಹಿತಿಗಳು ಬಯಲಿಗೆ ಬಂದಿವೆ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದರ್ಶನ್ ಆಪ್ತೆ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲ ಸಂದೇಶ ಕಳುಹಿ ಸಿದ್ದರು. ಇದು ತಮ್ಮ ಸಹಚರನ ಮೂಲಕ ದರ್ಶನ್‌ಗೆ ಗೊತ್ತಾಗಿತ್ತು. ಸಿಟ್ಟಿ ನಲ್ಲಿದ್ದ ದರ್ಶನ್, ತಮ್ಮ ಗುಂಪಿನ ಸದಸ್ಯರ ಜೊತೆ ಸೇರಿ ಸಂಚು ರೂಪಿಸಿದ್ದರು. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಸ್ವಾಮಿ ಅವರನ್ನು ನೋಡಿದ್ದ ದರ್ಶನ್, ಬೆಲ್ಟ್‌ನಿಂದ
ಥಳಿಸಿದ್ದಲ್ಲದೇ ಮರ್ಮಾಂಗಕ್ಕೆ ಮೂರು ಬಾರಿ ಒದ್ದಿದ್ದರು. ಅವರ ಸಹಚರರೂ ಮರ್ಮಾಂಗಕ್ಕೆ ಒದ್ದಿದ್ದರು. ಈ ಬಗ್ಗೆ ಆರೋಪಿ ದೀಪಕ್‌ ಹೇಳಿಕೆ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ‘ಪ್ರಕರಣದಲ್ಲಿ ತನ್ನ ಹೆಸರು ಬಾರದಂತೆ ಮಾಡಲು, ಹಲವರಿಗೆ ಕರೆ ಮಾಡಿದ್ದ ದರ್ಶನ್, ತನ್ನನ್ನು ಪಾರು ಮಾಡಿದರೆ ಕೋಟಿ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದ್ದಕ್ಕೆ ಪುರಾವೆಗಳಿವೆ’ ಎಂದು ಪೊಲೀಸ್ ಮೂಲಗಳು
ತಿಳಿಸಿವೆ.

ರಕ್ಷಣೆಗೆ ‘ಕೈ–ಕಮಲ’ ನಾಯಕರ ಕರೆ

ನಟ ದರ್ಶನ್‌ಗೆ ರಕ್ಷಣೆ ನೀಡುವಂತೆ ಅವರ ಜತೆಗೆ ನಿಕಟ ಬಾಂಧವ್ಯ ಹೊಂದಿರುವ ಹಲವು ರಾಜಕಾರಣಿಗಳು ಪೊಲೀಸರ ಮೇಲೆ ಒತ್ತಡ ಹಾಕಿದ್ದರು ಎಂಬುದು ಗೊತ್ತಾಗಿದೆ.

‘ರೇಣುಕಸ್ವಾಮಿ ಕೊಲೆಯಾದ ಬಳಿಕ  ದರ್ಶನ್, ಹಲವು ರಾಜಕಾರಣಿ
ಗಳಿಗೆ ಕರೆ ಮಾಡಿದ್ದರು. ಈ ಪೈಕಿ ಕಾಂಗ್ರೆಸ್‌ನ ಇಬ್ಬರು ಪ್ರಭಾವಿ ಮುಖಂಡರು ಹಾಗೂ ಬಿಜೆಪಿಯ ಒಬ್ಬರು, ಹಿರಿಯ ಪೊಲೀಸ್ ಅಧಿಕಾರಿಗಳ ಮೊಬೈಲ್‌ಗೆ ವಾಟ್ಸ್‌ಆ್ಯಪ್‌ ಮೂಲಕ 100ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದಾರೆ. ಆದರೆ, ಹಿರಿಯ ಅಧಿಕಾರಿ ಕರೆ ಸ್ವೀಕರಿಸಿಲ್ಲ. ಇದರಿಂದ ಸಿಟ್ಟಾದ ಮುಖಂಡರು, ಗೃಹ ಸಚಿವರಿಗೆ ಕರೆ ಮಾಡಿರುವುದಾಗಿ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT