ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ಜನವರಿ 7ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೋಲ್ಕತ್ತ ಮತ್ತು ಭುವನೇಶ್ವರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನಗಳು ಏಕಕಾಲಕ್ಕೆ ಟೇಕ್ ಆಫ್ ಗೆ ಸಿದ್ಧವಾದ ಕಾರಣ

ಸಂಭವಿಸಬೇಕಿದ್ದ ಭಾರಿ ದರುಂತ ಸ್ವಲ್ಪದರಲ್ಲಿಯೇ ತಪ್ಪಿದೆ ಎಂದು ತಿಳಿದು ಬಂದಿದೆ.

ಅಂದು ಎರಡು ವಿಮಾನಗಳು ಏಕಕಾಲಕ್ಕೆ ಒಂದೇ ದಿಕ್ಕಿನಲ್ಲಿ ಮೇಲೆ ಹಾರಲು ಸಜ್ಜಾಗಿದ್ದವು. ಆದರೆ,
ತಾಂತ್ರಿಕ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಇಂಡಿಗೋ ಸಂಸ್ಥೆಗೆ ಸೇರಿದ್ದ 6E455 ಮತ್ತು 6E246ಈ ಎರಡು ವಿಮಾನಗಳು ಒಂದೇ ರನ್ ವೇ ಗೆ ಬಂದು ಪರಸ್ಪರ ಡಿಕ್ಕಿಯಾಗಬೇಕಿತ್ತು. ಇದನ್ನು ಗಮನಿಸಿದ ರೇಡಾರ್ ಕಂಟ್ರೋಲ್ ಸಿಬ್ಬಂದಿ, ಒಂದು ವಿಮಾನವನ್ನು ಬಲಕ್ಕೆ ಮತ್ತೊಂದು ವಿಮಾನವನ್ನು ಎಡಕ್ಕೆ ಕಳುಹಿಸಿ ಅನಾಹುತ ತಪ್ಪಿಸಿದ್ದಾರೆ.

ಈ ಸಮಯದಲ್ಲಿ ಬೇರೆ ವಿಮಾನಗಳು ರನ್ ವೇ ಮೇಲೆ ಲ್ಯಾಂಡಿಂಗ್ ಆಗದ ಕಾರಣ ಹಾಗೂ ಸಿಬ್ಬಂದಿಯ ಎಚ್ಚರಿಕೆಯ ನಡೆಯಿಂದ ನೂರಾರು ಪ್ರಯಾಣಿಕರ ಪ್ರಾಣ ಉಳಿದಿದೆ. ಘಟನೆಯ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟನೆ ಕೇಳಿದ್ದಾರೆ ಎಂಬ ಮಾಹಿತಿ ದೊರೆಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.