ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವರಾಮೇಗೌಡ ಸಂಭಾಷಣೆ ಬಹಿರಂಗ: ಗೌಡರ ಕುಟುಂಬದ ವಿರುದ್ಧ ಮಾತುಕತೆ ಆಡಿಯೊ

Published 21 ಮೇ 2024, 0:30 IST
Last Updated 21 ಮೇ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ಗೆ ಸಂಬಂಧಿಸಿದಂತೆ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಮತ್ತು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಅವರ ಮಧ್ಯೆ ನಡೆಯಿತು ಎನ್ನಲಾದ ದೂರವಾಣಿ ಸಂಭಾಷಣೆಯ ಮತ್ತೊಂದು ಆಡಿಯೊ ಬಹಿರಂಗಗೊಂಡಿದೆ.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ.ಕುಮಾರ ಸ್ವಾಮಿ ಕುರಿತು ಶಿವರಾಮೇಗೌಡ ಕೀಳುಮಟ್ಟದ ಭಾಷೆ ಬಳಸಿದ್ದಾರೆ ಎಂದು ಜೆಡಿಎಸ್‌ ನಾಯಕರು ಮತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಡಿಯೊದಲ್ಲಿರುವುದೇನು?: ದೇವ ರಾಜೇಗೌಡರ ಜತೆ ಮಾತನಾಡು ವಾಗ, ‘ಶಿವರಾಮೇಗೌಡ ಅವರು, ದೇವೇಗೌಡ ಏನೂ ಕಡಿಮೆ ಇಲ್ಲ. ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ವ’ ಎನ್ನುವ ಮಾತು
ಆಡಿದ್ದಾರೆನ್ನಲಾಗಿದೆ. ಈ ಮಾತು ಜೆಡಿಎಸ್‌ ಕಾರ್ಯಕರ್ತರನ್ನು
ಕೆರಳಿಸಿದೆ.

‘ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ಬಲಿ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಎಚ್‌.ಡಿ.ಕುಮಾರಸ್ವಾಮಿ ತನ್ನ ಮಗ ನಿಖಿಲ್‌ನನ್ನು ಮುಂದಕ್ಕೆ ತರಲು ಮತ್ತು ಪ್ರಜ್ವಲ್‌ ಅನ್ನು ಮೂಲೆಗುಂಪು ಮಾಡಲು ವಿಡಿಯೊ ಬಿಟ್ಟಿದ್ದಾರೆ ಎಂದು ಹೇಳು’ ಎಂಬುದು ಆಡಿಯೊದಲ್ಲಿದೆ.

ಸಂಭಾಷಣೆ  ಹೀಗಿದೆ:

ಶಿವರಾಮೇಗೌಡ: ಕುಮಾರಸ್ವಾಮಿನೇ ಬಿಟ್ಟಿರಬೇಕು ಅಂತ ಹೇಳಿ. ಕುಮಾರ ಸ್ವಾಮಿಗೆ ಅವ್ನ ಮಗ ಮುಂದಕ್ಕೆ ಬರಬೇಕು ಅಂತ ಆಸೆ ಇದೆ. ಇವನು (ಪ್ರಜ್ವಲ್) ಮುಂದಕ್ಕೆ ಬಂದ್‌ ಬಿಟ್ನಲ್ಲ, ಆದ್ದರಿಂದ ಬಿಟ್ಟಿದ್ದಾನೆ ಅಂತ ಹೇಳಿ

ದೇವರಾಜೇಗೌಡ: ಹಾಂ

ಶಿವರಾಮೇಗೌಡ: ದ್ಯಾವೇಗೌಡ, ದ್ಯಾವೇ ಗೌಡನ ಮಕ್ಕಳು ಏನೂ ಕಡ್ಮೆ ಅಂತ ತಿಳ್ಕೊಬೇಡ. ಆತ್ಮಹತ್ಯೆ ಮಾಡ್ಕೊಳಲಿಲ್ವಾ ದೇವೇಗೌಡ .... ಕೇಳಣ್ಣ ಕೇಳಣ್ಣ ಒಂದು ನಿಮಿಷ ಕೇಳಿ... ಇನ್ನು ಏನೇನು ವಿಡಿಯೊ ಗಳಿವೆ?

ದೇವರಾಜೇಗೌಡ:ಹಾಂ

ಶಿವರಾಮೇಗೌಡ: ಬೆಳಿಗ್ಗೆ ಡಿಕೆ ಮಾತ ನಾಡಿದ್ರು, ನಿಮ್‌ ಹತ್ರ ಏನೇನ್ ಇದೆಯೋ ನಮಗೆ ಕೊಡಿ. ನೀವೇನು ತಲೆ ಕೆಡಿಸ್ಕೋಬೇಡಿ. ಅವರನ್ನು ಬಲಿ ಹಾಕೋಕೆ ಸರ್ಕಾರನೇ ತೀರ್ಮಾನ ಮಾಡಿದೆ. ಅರ್ಥ ಆಯ್ತಾ.

ದೇವರಾಜೇಗೌಡ:ಸರಿ ಅಣ್ಣಾ

ಶಿವರಾಮೇಗೌಡ: ನೀವೇನು ಪೆನ್‌ಡ್ರೈವ್ ಹಂಚಿಲ್ಲ. ಹಂಚಿದ್ರೂ ತಪ್ಪೇನಿದೆ ಹೇಳಿ

ದೇವರಾಜೇಗೌಡ: ರಾಂಗು ರೈಟು ಅನ್ನೊದ್‌ಕಿಂತಾ ಅಣ್ಣ...

ಶಿವರಾಮೇಗೌಡ: ಏನು ಆಗಲ್ಲ. ನೀವೇನ್‌ ಲಾಯರ್ ಅಲ್ವೇನ್ರಿ

ದೇವರಾಜೇಗೌಡ: ಅಣ್ಣಾ, ಕಾನೂನು ಪ್ರಕಾರ ಪನಿಶ್ಮೆಂಟ್‌ ಆಗತ್ತೆ. ಹೆಣ್ಣು ಮಕ್ಕಳ ಮಾನ ಮರ್ಯಾದೆ ಪ್ರಶ್ನೆ. ಅವರ ಶೀಲದ ಬಗ್ಗೆ ನಾವು ಯೋಚ್ನೆ ಮಾಡ್ಬೇಕಣ್ಣ

ಶಿವರಾಮೇಗೌಡ: ಅದರ ಬಗ್ಗೆ ನಿವ್ಯಾಕೆ ಯೋಚನೆ ಮಾಡ್ತೀರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT