ಶುಕ್ರವಾರ, 15 ಆಗಸ್ಟ್ 2025
×
ADVERTISEMENT
ADVERTISEMENT

ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಕೈ ಇಟ್ಟರೆ ಕಷ್ಟ: ವಿರೋಧ ಪಕ್ಷಗಳಿಂದ ಟೀಕಾಪ್ರಹಾರ

Published : 14 ಆಗಸ್ಟ್ 2025, 23:30 IST
Last Updated : 14 ಆಗಸ್ಟ್ 2025, 23:30 IST
ಫಾಲೋ ಮಾಡಿ
Comments
ಸೌಜನ್ಯಾ ಕೊಲೆ ಪ್ರಕರಣದ ತನಿಖೆಯು ತಾರ್ಕಿಕ ಅಂತ್ಯವನ್ನು ಏಕೆ ತಲುಪುತ್ತಿಲ್ಲ. ಮುಖ್ಯಮಂತ್ರಿ ಈ ಸಂಬಂಧ ಸದನದಲ್ಲಿ ಉತ್ತರ ನೀಡಬೇಕು 
ಹರೀಶ್ ಪೂಂಜಾ, ಬಿಜೆಪಿ
ಭಕ್ತರ ಮನಸ್ಸಿನಲ್ಲಿ ಗೊಂದಲ ಉಂಟಾಗುವ ಕೆಲಸ ನಡೆದಿದೆ. ಇದಕ್ಕೆ ತೆರೆ ಎಳೆಯುವ ಕೆಲಸ ಆಗಬೇಕು. ನಮ್ಮ ಪಕ್ಷ ಧರ್ಮಸ್ಥಳಕ್ಕೆ ವಿರೋಧವಾಗಿಲ್ಲ
ಅಶೋಕ ಕುಮಾರ್‌ ರೈ, ಕಾಂಗ್ರೆಸ್
ಹಿಂದೂ ಧರ್ಮ ಹಲವು ಸವಾಲುಗಳನ್ನು ಗೆದ್ದು ಬಂದಿದೆ. ಅದೇ ರೀತಿ ಧರ್ಮಸ್ಥಳವೂ ಸವಾಲುಗಳನ್ನು ಗೆದ್ದು ಹೊರಬರುತ್ತದೆ. ಅಪಪ್ರಚಾರ ನಡೆಸುವ ಯೂಟ್ಯೂಬರ್‌ಗಳನ್ನು ನಿಯಂತ್ರಿಸಬೇಕು
ಡಾ.ರಂಗನಾಥ್‌, ಕಾಂಗ್ರೆಸ್‌
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದವರಿಗೆ ಶಿಕ್ಷೆ ಕೊಡಿ. ಮುಸುಕುಧಾರಿ ತಪ್ಪಿತಸ್ಥನಾದರೆ ಗಲ್ಲಿಗೇರಿಸಿ
ಎಸ್‌.ಆರ್‌.ವಿಶ್ವನಾಥ್, ಬಿಜೆಪಿ
‘ಕೋಟಿ ಜನರ ಭಾವನೆಗಳ ಜತೆ ಆಡಬೇಡಿ’
ನನ್ನ ಬಂಧು ಧರ್ಮಸ್ಥಳ ಮಂಜುನಾಥ, ನನ್ನ ಭಾವನೆ ಗಳ ಜತೆ ಆಟ ಆಡಬೇಡಿ. ಕೋಟಿಗಟ್ಟಲೆ ಜನ ಇದೇ ರೀತಿ ಭಾವನೆ ಹೊಂದಿದ್ದಾರೆ. ಒಬ್ಬ ವಕೀಲ ಕೇರಳ ಸರ್ಕಾರಕ್ಕೆ ಪತ್ರ ಬರೆದು, ಈ ಪ್ರಕರಣದಲ್ಲಿ ಕರ್ನಾಟಕಕ್ಕೆ ನೆರವಾಗ ಬೇಕು ಎಂದಿದ್ದಾನೆ. ಹೀಗಾಗಿ ಇದರ ಹಿಂದೆ ದೊಡ್ಡ ಪಿತೂರಿಯೇ ಇದೆ. ಧರ್ಮಸ್ಥಳಕ್ಕೆ ಬುಲ್ಡೋಜರ್ ಹತ್ತಿಸಬೇಕು ಎಂದು ಹೇಳಿರುವ ವ್ಯಕ್ತಿ ಹಿಂದೆ ಶಾಸಕರ ಭವನಕ್ಕೆ ಬಾಂಬ್‌ ಇಟ್ಟಿದ್ದ, ನಿತ್ಯವೂ ಪ್ರಚೋದನಕಾರಿಯಾಗಿ ಮಾತನಾಡುವ ಈತನ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ?
ಎಸ್‌.ಸುರೇಶ್‌ಕುಮಾರ್‌, ರಾಜಾಜಿನಗರ ಶಾಸಕ
‘ನಗರ ನಕ್ಸಲರು ಹಿಂದಿದ್ದಾರೆ’
ಇಡೀ ಪ್ರಕರಣದ ಹಿಂದೆ ನಗರ ನಕ್ಸಲರು ಇದ್ದಾರೆ. ಇವರ ಒತ್ತಡದ ಕಾರಣ ಎಸ್‌ಐಟಿ ತನಿಖೆಗೆ ಆದೇಶಿಸಲಾಗಿದೆ. ಇವರು ನಿಮ್ಮ (ಮುಖ್ಯಮಂತ್ರಿ) ಹಿಂದೆ ಮುಂದೆ ಏಕೆ ಓಡಾಡಿಕೊಂಡಿದ್ದಾರೆ. ಹಲವು ವಕೀಲರು ಇದರಲ್ಲಿ ತೊಡಗಿಸಿ ಕೊಂಡಿದ್ದಾರೆ. ಇವರಿಗೆ ಹಣಕಾಸು ನೆರವು ನೀಡುತ್ತಿರುವವರು ಯಾರು? ಕುದುರೆಮುಖ ಉಳಿಸಿ ಆಂದೋಲನ ಉಳಿಸಿ ಎಂದು ಹೋರಾಟ ಆರಂಭಿಸಿದ್ದು ಇದೇ ಶಕ್ತಿಗಳು
ಆರಗ ಜ್ಞಾನೇಂದ್ರ, ಬಿಜೆಪಿ ಶಾಸಕ
ಧರ್ಮಸ್ಥಳ ಮುಟ್ಟಿದರೆ ಕ್ರಾಂತಿ ಆಗುತ್ತದೆ
ಹಿಂದೆ ಮೊಘಲರು ಹಿಂದೂ ಧರ್ಮ ನಾಶ ಮಾಡಲು ಪ್ರಯತ್ನಿಸಿದ್ದರು. ಈಗ ಆಧುನಿಕ ಮೊಘಲರು, ಬುದ್ಧಿಜೀವಿಗಳು, ಎಡಚರು, ಢೋಂಗಿ ಜಾತ್ಯತೀತರು ಆ ಕೆಲಸ ಮಾಡುತ್ತಿದ್ದಾರೆ. ವಿದೇಶಿ ಹಣವನ್ನು ಪಡೆದು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಧರ್ಮಸ್ಥಳವನ್ನು ಮುಟ್ಟಲು ಹೋದರೆ ದೊಡ್ಡ ಕ್ರಾಂತಿ ಆಗುತ್ತದೆ. ಸರ್ಕಾರ ಕೊನೆಯ ದಿನ ಎಣಿಸಬೇಕಾಗುತ್ತದೆ 
ಬಸನಗೌಡ ಪಾಟೀಲ ಯತ್ನಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT