ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ–ಹೊತ್ತಿಗೆ ಕಥಾಸ್ಪರ್ಧೆ: ಕಥೆಗಳಿಗೆ ಆಹ್ವಾನ

Last Updated 27 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ಹೊತ್ತಿಗೆ’ ಟ್ರಸ್ಟ್‌ ಕಥಾ ಸ್ಪರ್ಧೆಯನ್ನು ಆಯೋಜಿಸಿದ್ದು, 26 ವರ್ಷದೊಳಗಿನವರಿಂದ ಕಥೆಗಳನ್ನು ಆಹ್ವಾನಿಸಿದೆ. ಇದಲ್ಲದೆ, ಉತ್ತಮ ಅಪ್ರಕಟಿತ ಕಥಾ ಸಂಕಲನಕ್ಕೆ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ನೀಡಲು ಟ್ರಸ್ಟ್‌ ನಿರ್ಧರಿಸಿದ್ದು, ಕಥಾ ಸಂಕಲನಗಳನ್ನೂ ಆಹ್ವಾನಿಸಿದೆ. ಕಥಾ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರಿಗೆ ವಯೋಮಿತಿ ನಿರ್ಬಂಧವಿಲ್ಲ.

ಕಥಾ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ ₹5 ಸಾವಿರ, ₹3 ಸಾವಿರ ಹಾಗೂ ₹2 ಸಾವಿರ ನಗದು ಬಹುಮಾನವಿದೆ. ಈ ಹೊತ್ತಿಗೆ ಕಥಾ ಪ್ರಶಸ್ತಿಯು ₹10 ಸಾವಿರ ನಗದು ಬಹುಮಾನವನ್ನು ಒಳಗೊಂಡಿದೆ.

ಪ್ರಶಸ್ತಿಗೆ ಕಳುಹಿಸುವ ಸಂಕಲನವು 9ರಿಂದ 10 ಕಥೆಗಳನ್ನು ಒಳಗೊಂಡಿರಬೇಕು. ಕಥೆಗಳನ್ನು ಜ.29ರೊಳಗೆ ಕಳುಹಿಸಬೇಕು. ಯೂನಿಕೋಡ್‌ ತಂತ್ರಾಂಶದಲ್ಲಿ ಕಥೆಗಳನ್ನು ehottige.ks@gmail.comಗೆ ಮೇಲ್ ಮಾಡಬೇಕು ಎಂದು ಟ್ರಸ್ಟ್‌ ಅಧ್ಯಕ್ಷರಾದ ಜಯಲಕ್ಷ್ಮಿ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗೆ, 99002 22621.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT