ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ಭ್ರೂಣ ಹತ್ಯೆ: ಮಹಿಳೆ ಸಾವು

Published 29 ಮೇ 2024, 11:41 IST
Last Updated 29 ಮೇ 2024, 11:41 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರದಲ್ಲಿ ಸೋಮವಾರ ಹೆಣ್ಣು ಭ್ರೂಣ ತೆಗೆಯಿಸಿಕೊಂಡಿದ್ದ ಮಹಾರಾಷ್ಟ್ರದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಕೊಲ್ಲಾಪುರದ ಸೋನಾಲಿ ಕದಂ (33) ಮೃತ ಮಹಿಳೆ.

ಮೂರನೇ ಮಗು ಹೆಣ್ಣು ಎಂದು ತಿಳಿದ ಸೋನಾಲಿ ಅವರನ್ನು ಮಾರುತಿ ಕಾರವಾಡ ಎಂಬ ಮಧ್ಯವರ್ತಿ ಮಹಾಲಿಂಗಪುರದ ಕವಿತಾ ಬಾದನ್ನವರ ಎಂಬವರ ಬಳಿ ಕರೆದುಕೊಂಡು ಬಂದಿದ್ದರು. ವಿಜಯ ಗವಳಿ ಎಂಬ ಸಂಬಂಧಿಯೊಡನೆ ಬಂದ ಸೋನಾಲಿ ಅವರಿಗೆ ಈ ಹಿಂದೆ ಮಹಾಲಿಂಗಪುರದ ಆಸ್ಪತ್ರೆಯೊಂದರಲ್ಲಿ ಆಯಾ ಆಗಿ ಕೆಲಸ ಮಾಡಿದ್ದ ಕವಿತಾ ಅಬಾರ್ಷನ್ ಮಾಡಿದ್ದಾರೆ. ಗರ್ಭಪಾತ ಮಾಡಿಸಿಕೊಂಡು ವಾಪಸ್ ಹೋಗುವಾಗ ಸೋನಾಲಿ ಮೃತಪಟ್ಟಿದ್ದಾರೆ.

ಸ್ಥಳೀಯ ಆಸ್ಪತ್ರೆಗೆ ಹೋದಾಗ ಅಲ್ಲಿನ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಮಾರುತಿ, ವಿಜಯ ಗವಳಿ ಹಾಗೂ ಕವಿತಾಳನ್ನು ಬಂಧಿಸಲಾಗಿದೆ. ಮಹಾಲಿಂಗಪುರಕ್ಕೆ ಕರೆತಂದು‌ ವಿಚಾರಣೆ ಆರಂಭಿಸಲಾಗಿದೆ.

ಈ ಹಿಂದೆ ಕವಿತಾ‌ ವಿರುದ್ಧ ಭ್ರೂಣ ಹತ್ಯೆ ಪ್ರಕರಣ ದಾಖಲಾಗಿತ್ತು. ವಿಚಾರಣೆ ಪ್ರಗತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT