ನವದೆಹಲಿ: ಭದ್ರಾ ಮೇಲ್ದಂಡೆ ಯೋಜನೆಯಲ್ಲೂ ನಿಯಮಬಾಹಿರವಾಗಿ ಅರಣ್ಯ ಪ್ರದೇಶವನ್ನು ಬಳಸಿಕೊಂಡು ಜಲಸಂಪನ್ಮೂಲ ಇಲಾಖೆ ಕಾಮಗಾರಿ ನಡೆಸಿರುವುದು ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಿಂದ ತುಮಕೂರು ಶಾಖಾ ಕಾಲುವೆ ಕಾಮಗಾರಿಗಾಗಿ 63 ಎಕರೆ ಅರಣ್ಯ ಪ್ರದೇಶ ಬಳಸಿಕೊಳ್ಳಲಾಗುತ್ತಿದೆ. ಕೃಷ್ಣಮೃಗ ಮೀಸಲು ಸಂರಕ್ಷಣಾ ಅರಣ್ಯದ ಹಾಗೂ ಗೋಮಾಳ ಅರಣ್ಯದ ಬಳಕೆಗೆ ಕೇಂದ್ರ ಅರಣ್ಯ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು. ನಿಯಮ ಉಲ್ಲಂಘಿಸಿ ಅರಣ್ಯದಲ್ಲಿ ಕಾಮಗಾರಿ ನಡೆಸಲಾಗಿದೆ ಎಂದು ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವೇಶ್ವರಯ್ಯ ಜಲ ನಿಗಮವು, ‘ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ನೀರಾವರಿ ಒದಗಿಸುವ ಕಾಮಗಾರಿ ವೇಳೆ ಗೊತ್ತಿಲ್ಲದೇ ಲೋಪ ಆಗಿದೆ. ಇದನ್ನು ಮನ್ನಿಸಿ ಅರಣ್ಯ ಬಳಕೆಗೆ ಅನುಮತಿ ನೀಡಬೇಕು‘ ಎಂದು ಮನವಿ ಮಾಡಿಕೊಂಡಿದೆ.

ಕಾಲುವೆ ನಿರ್ಮಾಣಕ್ಕಾಗಿ ಕಡೂರು ತಾಲ್ಲೂಕಿನ ಅಡಿಗೆರೆ, ಅರೇಹಳ್ಳಿ, ಬಿಸ್ಲೇರಿ, ಗದಗನಹಳ್ಳಿ, ಗೌಡನಕಟ್ಟೆಹಳ್ಳಿ ಮತ್ತು ಬಾಸೂರು ಕಾವಲ್ನ ಕೃಷ್ಣಮೃಗ ಸಂರಕ್ಷಿತ ಮೀಸಲು ಪ್ರದೇಶದ ಅರಣ್ಯ ಬಳಕೆಗೆ ಒಪ್ಪಿಗೆ ಕೊಡುವಂತೆ ನಿಗಮವು ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಭದ್ರಾವತಿ ವಿಭಾಗದ ಡಿಸಿಎಫ್ 2025ರ ಮಾರ್ಚ್ 17ರಂದು ಯೋಜನಾ ಸ್ಥಳ ಪರಿಶೀಲನೆ ನಡೆಸಿ ಅರಣ್ಯ ಬಳಕೆಯಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂದು ಉಲ್ಲೇಖಿಸಿದ್ದರು. ಅತೀ ಅಗತ್ಯದ ಯೋಜನೆ ಎಂಬ ಕಾರಣ ನೀಡಿ ಅರಣ್ಯ ಬಳಕೆಗೆ ಶಿಫಾರಸು ಮಾಡಿದ್ದರು. ಸ್ಥಳ ಪರಿಶೀಲನೆ ನಡೆಸಿದ್ದ ಚಿಕ್ಕಮಗಳೂರು ಡಿಸಿಎಫ್ ಅವರು ಕೃಷ್ಣಮೃಗ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ಅರಣ್ಯ ಬಳಕೆಗೆ ಒಪ್ಪಿಗೆ ಕೇಳಲಾಗಿದೆ ಎಂದು ವರದಿ ನೀಡಿದ್ದರು. ಜತೆಗೆ, ಅರಣ್ಯ ಬಳಕೆಗೂ ಶಿಫಾರಸು ಮಾಡಿದ್ದರು.

ಅರಣ್ಯ ಬಳಕೆಗೆ ಅನುಮೋದನೆ ನೀಡಬಹುದು ಎಂದು ಅರಣ್ಯ ಪಡೆಯ ಮುಖ್ಯಸ್ಥರು ಮೇ 22ರಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ನಿಯಮ ಉಲ್ಲಂಘನೆಯನ್ನು ಸಕ್ರಮಗೊಳಿಸಬಹುದು ಎಂದೂ ಹೇಳಿದ್ದರು. ಆ ನಂತರ, ಎಸಿಎಸ್ ಅವರು ಕೇಂದ್ರ ಅರಣ್ಯ ಸಚಿವಾಲಯದಿಂದ ಅನುಮೋದನೆ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.