ಬೆಂಗಳೂರು: ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಲು ನಾಗರಿಕರು 'ಮುಖ್ಯಮಂತ್ರಿಗಳ ಪರಿಹಾರ ನಿಧಿ'ಗೆ ಉದಾರವಾಗಿ ದೇಣಿಗೆ ನೀಡಬೇಕು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ವಿನಂತಿಸಿದ್ದಾರೆ.

ಈ ಕುರಿತು ಸಾರ್ವಜನಿಕರಲ್ಲಿ ಮನವಿ ಮಾಡಿರುವ ಅವರು, ‘ಕೊರೊನಾ ವೈರಸ್ನಿಂದಾಗಿ ವಿಶ್ವದೆಲ್ಲೆಡೆ ಗಣನೀಯ ಪ್ರಮಾಣದಲ್ಲಿ ಜನ ಸಾವಿಗೀಡಾಗುತ್ತಿದ್ದಾರೆ. ಕರ್ನಾಟಕದಲ್ಲೂ ಈ ಸೋಂಕು ಕಾಣಿಸಿಕೊಂಡಿದೆ. ಇದರ ವಿರುದ್ಧ ಸರ್ಕಾರ ಹೋರಾಡುತ್ತಿದೆ. ಸಾರ್ವಜನಿಕರಿಗೆ ವೈದ್ಯೋಪಚಾರಗಳನ್ನು ಸರ್ಕಾರ ಮಾಡುತ್ತಿದ್ದು, ರೋಗ ಪತ್ತೆಗೆ ಪ್ರಯೋಗಾಲಯಗಳನ್ನೂ ಸ್ಥಾಪಿಸಿದೆ. ಸರ್ಕಾರದ ಈ ಹೋರಾಟದಲ್ಲಿ ಸಾರ್ವಜನಿಕರೂ ಕೈಜೋಡಿಸಬೇಕು. ಇದಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಬಹುದು,’ ಎಂದು ಅವರು ಮನವಿ ಮಾಡಿದ್ದಾರೆ.

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಲು ದೇಣಿಗೆ ಸಲ್ಲಿಸುವವರು ಆದಾಯ ತೆರಿಗೆಯಿಂದಲೂ ವಿನಾಯಿತಿ ಪಡೆಯಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆ ವಿವರ

ಖಾತೆ ಹೆಸರು: Chief ministers relief fund covid 19
ಬ್ಯಾಂಕ್ ಹೆಸರು: ಎಸ್ಬಿಐ
ಶಾಖೆ: ವಿಧಾನಸೌಧ
ಖಾತೆ ಸಂಖ್ಯೆ: 39234923151
ಐಎಫ್ಎಸ್ಸಿ ಕೋಡ್: SBIN0040277
ಐಎಂಸಿಆರ್ ಸಂಖ್ಯೆ: 560002419
ಚೆಕ್/ ಡಿಸಿ ಕಳುಹಿಸಿಕೊಡಬೇಕಾದ ವಿಳಾಸ: ನಂ.235–ಎ, 2ನೇ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು– 01

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.