ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಕಟ್ಟಡದ ವಾಸ್ತವಕ್ಕಿಂತ ಕಡಿಮೆ ಅಳತೆ ನಮೂದಿಸಿ, ತೆರಿಗೆ ವಂಚಿಸಿರುವ ಸುಮಾರು 10 ಸಾವಿರ ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಜಿಪಿಎಸ್ ಹಾಗೂ ವಿಶೇಷ ಮನೆ–ಮನೆ ಸಮೀಕ್ಷೆ ತಂಡದ ಮಾಹಿತಿ ಆಧಾರದಲ್ಲಿ ಆಸ್ತಿಗಳ ತೆರಿಗೆ ಪರಿಷ್ಕರಿಸಲಾಗಿದೆ. ಆಸ್ತಿ ಮಾಲೀಕರಿಗೆ ನೋಟಿಸ್ ನೀಡಿ, ಸುಮಾರು ₹370 ಕೋಟಿ ವಸೂಲಿ ಮಾಡಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.

ಆಸ್ತಿಗಳ ತೆರಿಗೆ ಪರಿಷ್ಕರಣೆಗೆ, ಜಿಬಿಎಯ ಮಾಹಿತಿ ತಂತ್ರಜ್ಞಾನ ವಿಭಾಗವು, ಎನ್ಐಸಿ ಸಹಯೋಗದಲ್ಲಿ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಿಪಿಎಸ್, ಡ್ರೋನ್ ಬಳಸಿಕೊಂಡು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಈ ಮೂಲಕ ಕಡಿಮೆ ತೆರಿಗೆ ಘೋಷಣೆ ಮಾಡಿ, ತೆರಿಗೆ ವಂಚಿಸಿರುವುದನ್ನು ದಾಖಲಿಸಲಾಗಿದೆ ಎಂದರು.

2020–21ನೇ ಸಾಲಿನಿಂದ ತೆರಿಗೆಯನ್ನು ಪರಿಷ್ಕರಿಸಿ, ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರತಿ ವರ್ಷಕ್ಕೆ ಪ್ರತಿ ಆಸ್ತಿಗೆ ಒಂದು ನೋಟಿಸ್ನಂತೆ 49 ಸಾವಿರಕ್ಕೂ ಹೆಚ್ಚು ನೋಟಿಸ್ ಜಾರಿ ಮಾಡಲಾಗಿದೆ. ಎಸ್ಎಂಎಸ್ ಮೂಲಕವೂ ಸಂದೇಶ ಕಳುಹಿಸಲಾಗಿದ್ದು, ಐವಿಆರ್ಎಸ್ ಮೂಲಕ ಕರೆ ಮಾಡಿ, ವ್ಯತ್ಯಾಸ ಇರುವ ತೆರಿಗೆಯನ್ನು ಪಾವತಿಸಲು ಸೂಚಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಆಸ್ತಿ ತೆರಿಗೆ ಪರಿಷ್ಕರಣೆ ಕಾರ್ಯವನ್ನು ವಿಶೇಷ ತಂಡ ಮುಂದುವರಿಸಿದ್ದು, ದಿನಕ್ಕೆ ಸಾವಿರಾರು ಆಸ್ತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ತೆರಿಗೆ ವಂಚಿಸಿದ ಎಲ್ಲರಿಗೂ ನೋಟಿಸ್ ಜಾರಿ ಮಾಡಿ ವಸೂಲಿ ಮಾಡಲಾಗುತ್ತದೆ ಎಂದು ಹೇಳಿದರು.

ಲೆಕ್ಕಾಚಾರ ಹೇಗೆ?:

‘ಕೆಂಗೇರಿಯಲ್ಲಿರುವ ಆಸ್ತಿ ಮಾಲೀಕರೊಬ್ಬರು ಕಟ್ಟಡದ ಬಿಲ್ಟಪ್ ಏರಿಯಾವನ್ನು 2,800 ಚದರ ಅಡಿ ಎಂದು ನಮೂದಿಸಿ ತೆರಿಗೆ ಪಾವತಿಸುತ್ತಿದ್ದಾರೆ. ವಿಶೇಷ ತಂಡ ಸಮೀಕ್ಷೆ ನಡೆಸಿದಾಗ, ಕಟ್ಟಡದ ಬಿಲ್ಟಪ್ ಏರಿಯಾ 5,458 ಅಡಿ ಎಂಬುದು ಸಾಬೀತಾಯಿತು. ಅವರು ₹4,562 ತೆರಿಗೆ ಪಾವತಿಸುತ್ತಿದ್ದರು. ಆದರೆ, ವಾಸ್ತವದಲ್ಲಿ ₹12,496 ಪಾವತಿಸಬೇಕಿತ್ತು. ಹೀಗಾಗಿ, 2021–22ನೇ ಸಾಲಿನಿಂದ ಶೇ 26ರಷ್ಟು ಬಡ್ಡಿ ₹1,904, ತೆರಿಗೆ ಕಡಿಮೆ ಪಾವತಿಗೆ ದಂಡ ₹7,933, ಈವರೆಗಿನ ಬಡ್ಡಿ ₹4,621, ಘನತ್ಯಾಜ್ಯ ನಿರ್ವಹಣೆ ಸೆಸ್ ₹240 ಸೇರಿದಂತೆ ಒಟ್ಟಾರೆ ₹22,633 ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಈ ಮೊತ್ತ 2021–22ನೇ ಸಾಲಿನದ್ದಾಗಿದ್ದು, ನಂತರದ ಸಾಲಿನ ಬಾಕಿಯನ್ನು ಪ್ರತ್ಯೇಕವಾಗಿ ಲೆಕ್ಕ ಮಾಡಿ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.