ಬೆಂಗಳೂರು: ರಾಜ್ಯದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು (ಜಿಟಿಟಿಸಿ) ಆಫ್ರಿಕಾದ ನಮೀಬಿಯಾದಲ್ಲಿ ಸ್ಥಾಪಿಸುವ ಕುರಿತು ಆಫ್ರಿಕಾ ಇಂಡಿಯಾ ಎಕನಾಮಿಕ್ ಫೌಂಡೇಶನ್ (ಎಐಇಎಫ್) ಜತೆ ಮಾತುಕತೆ ನಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ‘ವೃತ್ತಿ ತರಬೇತಿಯಲ್ಲಿ ಭಾರತ– ಆಫ್ರಿಕಾ ಸಹಕಾರವನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಆಫ್ರಿಕಾ ಇಂಡಿಯಾ ಎಕನಾಮಿಕ್ ಫೌಂಡೇಶನ್ ಜಿಟಿಟಿಸಿಯನ್ನು ಪ್ರಮುಖ ಜ್ಞಾನ ಮತ್ತು ತಂತ್ರಜ್ಞಾನ ಪಾಲುದಾರ ಸಂಸ್ಥೆಯನ್ನಾಗಿ ಮಾಡಿಕೊಳ್ಳಲು ಮುಂದೆ ಬಂದಿದೆ’ ಎಂದು ಹೇಳಿದರು.

ಆಫ್ರಿಕಾದ ಕೈಗಾರಿಕಾ ತರಬೇತಿ ಅಗತ್ಯಗಳಿಗೆ ಜಿಟಿಟಿಸಿಯು ಉತ್ತಮ ಮತ್ತು ದೃಢವಾದ ಮಾದರಿಯಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಚರ್ಚೆ ನಡೆದಿದೆ. ಜಿಟಿಟಿಸಿ ಐದು ದಶಕಗಳಿಗೂ ಹೆಚ್ಚು ಕಾಲದ ಪರಂಪರೆಯನ್ನು ಹೊಂದಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆ. ರಾಜ್ಯದಾದ್ಯಂತ 20 ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಸಾವಿರಾರು ಜನರಿಗೆ ಉಪಕರಣಗಳು, ಸಿಎನ್ಸಿ ಕಾರ್ಯಾಚರಣೆಗಳು, ಮೆಕಾಟ್ರಾನಿಕ್ಸ್ ಮತ್ತು ರೊಬೊಟಿಕ್ಸ್ನಲ್ಲಿ ತರಬೇತಿ ನೀಡಲಾಗುತ್ತಿದೆ. ಈ ಎಲ್ಲ ಪರಿಣತಿಯನ್ನು ಆಫ್ರಿಕನ್ ಸಂದರ್ಭಗಳಿಗೆ ಸರಾಗವಾಗಿ ಅಳವಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಭಾರತ ಮತ್ತು ಆಫ್ರಿಕಾ ಖಂಡದ 54 ರಾಷ್ಟ್ರಗಳ ನಡುವೆ ಜ್ಞಾನ, ತಂತ್ರಜ್ಞಾನ, ವ್ಯಾಪಾರ ಮತ್ತು ಹೂಡಿಕೆಯ ಕಾರ್ಯತಂತ್ರದ ಏಕೀಕರಣವನ್ನು ಉತ್ತೇಜಿಸಲು ಎಐಇಎಫ್ ರಚಿಸಲಾಗಿದೆ. ಇದರ ಉಪಕ್ರಮಗಳು ಆಫ್ರಿಕನ್ ಒಕ್ಕೂಟದಿಂದ ಅನುಮೋದನೆ ಪಡೆದಿವೆ. ಅಡಿಸ್ ಅಬಾಬಾದಲ್ಲಿ 2020 ರಲ್ಲಿ ನಡೆದ ಶೃಂಗಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿತ್ತು ಎಂದು ತಿಳಿಸಿದರು.

ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಡಾ.ವೈ.ಕೆ.ದಿನೇಶ್ ಕುಮಾರ್, ಈ ಪಾಲುದಾರಿಕೆಯ ಮೂಲಕ ಆಫ್ರಿಕಾದಾದ್ಯಂತ ಜಿಟಿಟಿಸಿಯ ಹಳೆಯ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಕರ್ನಾಟಕದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಹೊಸ ಮಾರುಕಟ್ಟೆ ತೆರೆದುಕೊಳ್ಳಲಿದೆ ಹಾಗೂ ಕರ್ನಾಟಕದ ಕೌಶಲ ಮಾದರಿಯು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುತ್ತದೆ ಎಂದು ಹೇಳಿದರು.

ಎಐಇಎಫ್ ಜಂಟಿ ಕಾರ್ಯದರ್ಶಿ ಆರ್.ಕಾಂಚನವೇಲು, ನಮೀಬಿಯಾದಲ್ಲಿ ಯುರೇನಿಯಂ, ವಜ್ರಗಳು, ಚಿನ್ನ ಮತ್ತು ಅಪರೂಪದ ಖನಿಜಗಳು ಹೇರಳವಾಗಿವೆ. ಅಲ್ಲದೇ, ಇಂಧನ, ಕೃಷಿ ವ್ಯವಹಾರ, ಲಾಜಿಸ್ಟಿಕ್ಸ್ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಈ ಕ್ಷೇತ್ರಗಳಲ್ಲಿ ಕೌಶಲ ಮತ್ತು ತರಬೇತಿ ಅಗತ್ಯವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.