ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಅವಘಡ: ಕಾಸಿಗಾಗಿ ಹುದ್ದೆ ನೀಡಿದ್ದರ ಫಲ-ಎಚ್‌.ಡಿ. ಕುಮಾರಸ್ವಾಮಿ

Published 13 ಆಗಸ್ಟ್ 2024, 15:13 IST
Last Updated 13 ಆಗಸ್ಟ್ 2024, 15:13 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಮುಖ ಜವಾಬ್ದಾರಿ ಹೊಂದಿರುವ ಹುದ್ದೆಗಳಿಗೂ ಹಣ ಪಡೆದು ವರ್ಗಾವಣೆ ಮಾಡುವ ಪರಿಪಾಟದಿಂದಾಗಿಯೇ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಅವಘಡದಂತಹ ಘಟನೆಗಳು ನಡೆಯುತ್ತಿವೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಹಣಕೊಟ್ಟು ಪ್ರಮುಖ ಸ್ಥಾನಕ್ಕೆ ಬರುವ ಮುಖ್ಯ ಎಂಜಿನಿಯರ್‌, ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ತಾವು ಆ ಹುದ್ದೆಯಲ್ಲಿ ಇರುವಷ್ಟು ದಿನವೂ ಕೊಟ್ಟ ಹಣ ಮರಳಿ ಪಡೆಯುವ ಕುರಿತು ಯೋಚಿಸುತ್ತಾರೆ. ಜಲಾಶಯಗಳ ಸುರಕ್ಷತೆ ಅವರಿಗೆ ಪ್ರಮುಖ ವಿಷಯವೇ ಆಗುವುದಿಲ್ಲ ಎಂದರು.

ತುಂಗಭದ್ರಾ ಅಣೆಕಟ್ಟು ಪ್ರಕರಣದ ಕುರಿತು ವಿಸ್ತೃತ ತನಿಖೆ ಮಾಡಬೇಕು. ತಂತ್ರಜ್ಞರನ್ನು ಒಳಗೊಂಡ ಸಮಿತಿ ರಚಿಸಬೇಕು. ರೈತರ ಬೆಳೆಗಳಿಗೆ ನೀರು ಸಿಗದಂತೆ ಆಗಿರುವ ಅನ್ಯಾಯಕ್ಕೆ ಹೊಣೆಗಾರರನ್ನು ಗುರುತಿಸಬೇಕು. ಇಂತಹ ಘಟನೆಗಳು ಮರುಕಳುಹಿಸದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT