ಮೈಸೂರು: ‘ಯಜ್ಞ ಕುಂಡ ಯಾವ ಕಡೆ ಇರಬೇಕು ಎಂಬ ಪಾಠ ಯಾರಿಗೆ ಬೇಕು? ಪಠ್ಯಪುಸ್ತಕದಲ್ಲಿ ಧರ್ಮ ಆಧಾರಿತ ಪಾಠಗಳು ಯಾವುದೇ ಕಾರಣಕ್ಕೂ ಬೇಡ. ಇತ್ತೀಚೆಗೆ ಪಠ್ಯಗಳ ಕೇಸರೀಕರಣ ಅಪಾಯಕಾರಿ ಬೆಳವಣಿಗೆ’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿ, ‘ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ರಾಜಕೀಯ ಸಂಘರ್ಷವಲ್ಲ. ನಾವೆಲ್ಲ ಸೇರಿ ಶಿಕ್ಷಣ ವ್ಯವಸ್ಥೆ ಹಾಳು ಮಾಡುತ್ತಿದ್ದೇವೆ. ಶಿಕ್ಷಣ ತಜ್ಞರಲ್ಲದವರು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರಾಗಿರುವುದು ದುರಂತ. ರೋಹಿತ್ ಚಕ್ರತೀರ್ಥ ಒಬ್ಬ ಸಂಘ ಪರಿವಾರದ ಕಾರ್ಯಕರ್ತ’ ಎಂದು ಕಿಡಿಕಾರಿದರು.

‘ನಾರಾಯಣಗುರು ಅವರ ಪಠ್ಯ ಕೈಬಿಡುವುದು ತಪ್ಪು. ತಮಗೆ ತೋಚಿದ ಹಾಗೆ ಯಾರನ್ನೋ ಪಠ್ಯದಲ್ಲಿ ಸೇರಿಸಿದರೆ ಹೇಗೆ? ಟಿಪ್ಪು ಬ್ರಿಟಿಷರ ವಿರುದ್ಧ ಮಂಡಿಯೂರಲಿಲ್ಲ. ಮಕ್ಕಳನ್ನು ಒತ್ತೆ ಇಟ್ಟು ರಾಜ್ಯ ರಕ್ಷಣೆ ಮಾಡಿದ್ದ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.