ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದಿಂದ ಕಾಡಿದ್ದ ಎಚ್‌1ಎನ್‌1 ನಿಯಂತ್ರಣ

ಪ್ರತಿ ವರ್ಷ ಮಳೆಗಾಲದಲ್ಲಿ ಹೆಚ್ಚುತ್ತಿದ್ದ ಜ್ವರ
Last Updated 17 ಆಗಸ್ಟ್ 2020, 3:00 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸಾವಿರಾರು ಮಂದಿಯನ್ನು ಕಾಡುತ್ತಿದ್ದ ಎಚ್‌1ಎನ್‌1 ಜ್ವರ, ಈ ವರ್ಷ ನಿಯಂತ್ರಣಕ್ಕೆ ಬಂದಿದೆ. ಮೂರು ತಿಂಗಳಿಂದ ಒಂದೇ ಒಂದು ಪ್ರಕರಣ ಕೂಡ ವರದಿಯಾಗಿಲ್ಲ.

ಪ್ರತಿ ವರ್ಷ ಮೇ, ಜೂನ್ ತಿಂಗಳ ಬಳಿಕ ಈ ಜ್ವರ ತೀವ್ರತೆ ಪಡೆದುಕೊಳ್ಳುತ್ತಿತ್ತು. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸೋಂಕು. ಹೀಗಾಗಿ ಒಬ್ಬರು ಸೋಂಕಿತರಾದಲ್ಲಿ ಅವರ ಕುಟುಂಬದ ಸದಸ್ಯರೆಲ್ಲರೂ ಸೋಂಕಿತರಾಗುವ ಸಾಧ್ಯತೆ ಇರುತ್ತದೆ.

ಕಳೆದ ಒಂದು ದಶಕದಲ್ಲಿ 15,119 ಮಂದಿ ಈ ಜ್ವರದಿಂದ ಬಳಲಿದ್ದು, 532 ಮಂದಿ ಮೃತಪಟ್ಟಿದ್ದರು. ಈ ವರ್ಷದ ಮೊದಲ ಮೂರು ತಿಂಗಳಲ್ಲಿ 400ಕ್ಕೂ ಅಧಿಕ ಮಂದಿ ಎಚ್‌1ಎನ್‌1 ಸೋಂಕಿತರಾಗಿ, ಮೂವರು ಮೃತಪಟ್ಟಿ ದ್ದರು. ಈ ವರ್ಷವೂ ಹೆಚ್ಚಿನ ಪ್ರಕರಣ ವರದಿಯಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಆರೋಗ್ಯ ಇಲಾಖೆ, ಅಗತ್ಯ ಮುಂ ಜಾಗ್ರತೆ ವಹಿಸಲು ಮನವಿ ಮಾಡಿತ್ತು.

ಕಳೆದ ವರ್ಷ ಈ ವೇಳೆಗೆ 1,838 ಮಂದಿ ಸೋಂಕಿತರಾಗಿದ್ದರು. ವರ್ಷಾಂತ್ಯಕ್ಕೆ96 ಮಂದಿ ಈ ಜ್ವರಕ್ಕೆ ಮೃತಪಟ್ಟಿದ್ದರು. ಈ ವರ್ಷ ಕೊರೊನಾ ಸೋಂಕಿನ ಭೀತಿಯಿಂದಾಗಿ ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆ, ಮುಖಗವಸು ಬಳಕೆ, ಸ್ವಚ್ಛತೆಗೆ ಆದ್ಯತೆ, ಸೋಂಕು ನಿವಾರಕ ಸಿಂಪಡಣೆ ಸೇರಿದಂತೆ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ರಾಜ್ಯದಾದ್ಯಂತ ಕೈಗೊಳ್ಳ ಲಾಯಿತು. ಹೀಗಾಗಿ ರಾಜ್ಯದಲ್ಲಿ ಎಚ್‌1ಎನ್1‌ ನಿಯಂತ್ರಣಕ್ಕೆ ಬಂದಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಲಕ್ಷಣಗಳಲ್ಲಿ ಸಾಮ್ಯತೆ: ಎಚ್‌1ಎನ್‌1 ಸೋಂಕು ಕಳೆದ ವರ್ಷ ಬೆಂಗಳೂರು ನಗರ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ, ಉಡುಪಿ, ಬೆಳಗಾವಿ ಹಾಗೂ ದಾವಣಗೆರೆ ಜಿಲ್ಲೆಯನ್ನು ಹೆಚ್ಚಾಗಿ ಕಾಡಿತ್ತು. ಈ ವರ್ಷ ಈ ಜಿಲ್ಲೆಗಳಲ್ಲಿ ಅಧಿಕ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಎಚ್‌1ಎನ್‌1 ಹಾಗೂ ಕೋವಿಡ್‌ ಲಕ್ಷಣಗಳಲ್ಲಿ ಸಾಮ್ಯತೆಯಿದೆ.

‘ಎಚ್‌1ಎನ್‌1 ಸೋಂಕು ಕೂಡ ಕೋವಿಡ್ ಮಾದರಿಯಲ್ಲಿಯೇ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಆದರೆ, ಕೊರೊನಾದಷ್ಟು ವೇಗವಾಗಿ ಹರಡುವುದಿಲ್ಲ. ಲಕ್ಷಣಗಳಲ್ಲಿ ಸಾಮ್ಯತೆ ಇದ್ದು, ಕೋವಿಡ್‌ ಪರೀಕ್ಷೆ ನಡೆಸಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಪ್ರಕರಣಗಳಲ್ಲಿ ಎಚ್‌1ಎನ್‌1 ಸೋಂಕಿತರನ್ನೂ ಕೋವಿಡ್‌ ಪೀಡಿತರು ಎಂದು ಪರಿಗಣಿಸಿ, ಚಿಕಿತ್ಸೆ ನೀಡಿರುವ ಸಾಧ್ಯತೆಯಿದೆ. ಇದರಿಂದಾಗಿಯೂ ಕಳೆದ ಕೆಲ ದಿನಗಳಿಂದ ಎಚ್‌1ಎನ್‌1 ಪ್ರಕರಣ ಬೆಳಕಿಗೆ ಬಂದಿರಲಿಕ್ಕಿಲ್ಲ’ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಹಿರಿಯ ವೈದ್ಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT