ಬೆಂಗಳೂರು: ‘ಹಂಪಿಯು ಕೇವಲ ಸ್ಮಾರಕಗಳ ಅವಶೇಷಗಳಲ್ಲ, ವಿಜಯನಗರ ಸಾಮ್ರಾಜ್ಯದ ವೈಭವ ಮತ್ತು ಕಲಾತ್ಮಕತೆಯನ್ನು ಪ್ರತಿಬಿಂಬಿಸುವ ಜೀವಂತ ಭೂಮಿ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.

ರಾಜಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ, ಛಾಯಾಗ್ರಾಹಕ ಸೈಬಲ್ ದಾಸ್ ಅವರ ಹಂಪಿ ಚಿತ್ರಸಂಪುಟ ‘ಹಂಪಿ: ದಿ ರಿಚುಯಲ್ಸ್ ಆಫ್ ಟೈಮ್’ ಪುಸ್ತಕವನ್ನು ಜನಾರ್ಪಣೆ ಮಾಡಿ ಅವರು ಮಾತನಾಡಿದರು. ‘ಸೈಬಲ್ ದಾಸ್ ಅವರು ಹಂಪಿ ಅವಶೇಷಗಳಲ್ಲಿನ ಜೀವಂತಿಕೆಯನ್ನು ಸೆರೆ ಹಿಡಿದಿದ್ದಾರೆ. ಈ ಚಿತ್ರಗಳು ನೋಡುಗರನ್ನು ಹಿಂದಿನ ಕಾಲಘಟ್ಟಕ್ಕೆ ಕರೆದೊಯ್ಯುತ್ತವೆ’ ಎಂದರು.

ಕಾನೂನು ಸಚಿವ ಎಚ್.ಕೆ.ಪಾಟೀಲ, ‘ಸೈಬಲ್ ದಾಸ್ ಅವರ ಪುಸ್ತಕ ಹಂಪಿಯ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಐತಿಹಾಸಿಕ ಮಹತ್ವವನ್ನು ಸೆರೆ ಹಿಡಿದಿದೆ. ಒಂದು ಕಾಲದಲ್ಲಿ ಪ್ರವರ್ಧಮಾನದಲ್ಲಿದ್ದ ಪ್ರಾಚೀನ ನಾಗರಿಕತೆಗೆ ಈ ಕೃತಿ ಜೀವ ತುಂಬಿದೆ’ ಎಂದು ಹೇಳಿದರು.

ಪುಸ್ತಕವನ್ನು ಪ್ರಕಟಿಸಿರುವ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ, ‘ರಾಜಸ್ಥಾನದಿಂದ ಬಂದು ಇಲ್ಲಿ ನೆಲಸಿದವನನ್ನು ಈ ರಾಜ್ಯ ಬಿಗಿದಪ್ಪಿ ಬೆಳೆಸಿದೆ. ಅದಕ್ಕೆ ಕೃತಜ್ಞಾಪೂರ್ವಕವಾಗಿ ಈ ಪುಸ್ತಕವನ್ನು ಹೊರತರುವ ಪ್ರಯತ್ನ ಮಾಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.