ಬೆಂಗಳೂರು:ಉಪಚುನಾವಣೆ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಬಳಲಿದ್ದು ವೈದ್ಯರ ಸೂಚನೆ ಮೇರೆಗೆ ಅವರು 10 ದಿನಗಳ ವಿಶ್ರಾಂತಿ ಪಡೆಯಲಿದ್ದಾರೆ.

ಈ ಅವಧಿಯಲ್ಲಿ ಯಾವುದೇ ಪ್ರವಾಸ,ರಾಜಕೀಯ ನಾಯಕರು, ಸಾರ್ವಜನಿಕರ ಭೇಟಿ ಮಾಡದೇ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಎಚ್‌ಡಿಕೆಸಾರ್ವಜನಿಕ ಭೇಟಿಗೆ ಲಭ್ಯವಿರುವುದಿಲ್ಲ.

ಬಳಲಿಕೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಬುಧವಾರ ವೈದ್ಯರ ಸೂಚನೆ ಮೇರೆಗೆ ಹಲವು ತಪಾಸಣೆಗೆ ಒಳಪಟ್ಟರು. ರಕ್ತದಲ್ಲಿ ಸೋಂಕು ಉಂಟಾಗಿರುವುದು ಪರೀಕ್ಷಾ ವರದಿಗಳಿಂದ ಗೊತ್ತಾಗಿದೆ. ಇದೇ ಹಿನ್ನೆಲೆಯಲ್ಲಿ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ.

2009ರಲ್ಲಿ ಉತ್ತರ ಕರ್ನಾಟಕ ಪ್ರವಾಹ ಪೀಡಿತರ ಪರಿವೀಕ್ಷಣೆಗೆ ಹೋಗಿದ್ದಾಗ ಇದೇ ರೀತಿ ಅವರಿಗೆಸೋಂಕು ಉಂಟಾಗಿತ್ತು. ಸಾರ್ವಜನಿಕರು ಸಹಕರಿಸಬೇಕಾಗಿ ಎಚ್‌ಡಿಕೆಕುಟುಂಬ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.