ಕುಟುಂಬ ಸದಸ್ಯರ ನಡುವೆ ಒಡಕಿನ ಪ್ರಕರಣ
‘ನಮ್ಮ ತಂದೆಯ ಮರಣದ ನಂತರವೂ ಅವರ ಹೆಸರಿನಲ್ಲಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಲು ನನ್ನ ತಾಯಿ ಮತ್ತು ನನ್ನ ತಮ್ಮ ನಮ್ಮ ತಂದೆಯ ಆಧಾರ್ ಕಾರ್ಡ್ ಮೊಬೈಲ್ ಫೋನ್ ಇತ್ಯಾದಿಗಳನ್ನು ಬಳಸುತ್ತಿದ್ದಾರೆ’ ಎಂದು ಹಿರಿಯ ಪುತ್ರ ಆಪಾದಿಸಿದ್ದರು. ಪರಿಣಾಮ ಅರ್ಜಿದಾರ ಮಹಿಳೆಯ ಹಿರಿಯ ಮಗ ಸಲ್ಲಿಸಿದ್ದ ದೂರಿನ ಆಧಾರದಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪ್ರಕರಣದ ‘ಮರು ಅಥವಾ ಮುಂದಿನ’ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಮತ್ತು ಆಕೆಯ ಕಿರಿಯ ಪುತ್ರ ಹೈಕೋರ್ಟ್ ಮೆಟ್ಟಿಲೇರಿದ್ದರು.