ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವಿವಿಗೆ ₹342 ಕೋಟಿ: ಶಿಕ್ಷಣ ಪರಿಷತ್‌ ಶಿಫಾರಸು

Published 29 ನವೆಂಬರ್ 2023, 0:30 IST
Last Updated 29 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವಿಶ್ವವಿದ್ಯಾಲಯದ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಸರ್ಕಾರ ಐದು ವರ್ಷಗಳ ಅವಧಿಗೆ ಕನಿಷ್ಠ ₹342 ಕೋಟಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಮಿತಿ ಶಿಫಾರಸು ಮಾಡಿದೆ.

ಉನ್ನತ ಶಿಕ್ಷಣದ ಪ್ರಗತಿ ಕುರಿತು ಪರಿಶೀಲಿಸಲು ಕೆಲ ತಿಂಗಳ ಹಿಂದೆ ಉನ್ನತ ಶಿಕ್ಷಣ ಪರಿಷತ್ ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿತ್ತು.

ಒಂದು ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲು 100ರಿಂದ 200 ಎಕರೆ ಭೂಮಿ ನೀಡಬೇಕು. ರಾಜ್ಯದಲ್ಲಿ ಸ್ಥಾಪಿಸುವ ಯಾವುದೇ  ವಿಶ್ವವಿದ್ಯಾಲಯಗಳಿಗೆ 10 ಪ್ರಾಧ್ಯಾಪಕರು, 20 ಸಹ ಪ್ರಾಧ್ಯಾಪಕರು ಹಾಗೂ 40 ಸಹಾಯಕ ಪ್ರಾಧ್ಯಾಪಕರು ಬೇಕು. ಕನಿಷ್ಠ 25 ವಿಭಾಗಗಳನ್ನು ಒಳಗೊಂಡಿರಬೇಕು. ಹಾಗಾಗಿ, ಹೊಸ ವಿಶ್ವವಿದ್ಯಾಲಯಗಳಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿ, ವೇತನ–ಭತ್ಯೆ, ಕಟ್ಟಡಗಳ ನಿರ್ಮಾಣ, ಪೀಠೋಪಕರಣ, ಮೂಲಸೌಕರ್ಯ ಸೇರಿದಂತೆ ಐದು ವರ್ಷಗಳವರೆಗೆ ಅಗತ್ಯವಾದ ಅನುದಾನ ನೀಡಬೇಕು. ಅದಕ್ಕಾಗಿ ಪ್ರತಿ ವಿಶ್ವವಿದ್ಯಾಲಯಕ್ಕೂ ಭೂಮಿ ಹೊರತುಪಡಿಸಿ ₹342 ಕೋಟಿ ನಿಗದಿ ಮಾಡಬೇಕು ಎಂದು ಶಿಫಾರಸು ಮಾಡಿದೆ. 

ವರದಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಶೀಘ್ರ ಮುಖ್ಯಮಂತ್ರಿಗೆ ಸಲ್ಲಿಸಲಿದ್ದಾರೆ. ಜತೆಗೆ, ಕಳೆದ ವರ್ಷ ಸ್ಥಾಪಿಸಿದ್ದ ಚಾಮರಾಜನಗರ, ಹಾಸನ, ಮಂಡ್ಯ, ಬೀದರ್, ಕೊಡಗು, ಕೊಪ್ಪಳ, ಬಾಗಲಕೋಟೆ, ಹಾವೇರಿ ಸೇರಿ ಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಿತಿಗತಿ ಕುರಿತು ವಿವರವಾದ ವರದಿ ಸಿದ್ಧಪಡಿಸಲು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT