ಯುದ್ಧ ಬೇಡವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಶಾಂತಿ ದೃಷ್ಟಿಯಿಂದಷ್ಟೇ. ಆ ಹೇಳಿಕೆಯನ್ನು ನಾವು ದೌರ್ಬಲ್ಯ ಎಂದು ಅರ್ಥೈಸಿಕೊಳ್ಳಬಾರದು
ಜಿ.ಪರಮೇಶ್ವರ, ಗೃಹ ಸಚಿವ
ಪುಲ್ವಾಮಾದಲ್ಲಿ 40 ಸೈನಿಕರ ಬಲಿ ತೆಗೆದುಕೊಂಡ ಉಗ್ರರ ದಾಳಿಯ ನಂತರವಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಇಂದು ಪಹಲ್ಗಾಮ್ ಘಟನೆ ನಡೆಯುತ್ತಿರಲಿಲ್ಲ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಪಾಕಿಸ್ತಾನವು ಉಗ್ರರ ಮೂಲಕ ಭಾರತದ ಮೇಲೆ ದಾಳಿ ಮಾಡುತ್ತಿದ್ದರೂ ಅವರ ವಿರುದ್ಧ ಯುದ್ಧ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು ಅಕ್ಷಮ್ಯ ಅಪರಾಧ. ಅವರು ದೇಶದ ಕ್ಷಮೆ ಕೇಳಬೇಕು. ಅಲ್ಪಸಂಖ್ಯಾತರ ಓಲೈಕೆಗಾಗಿ ಪಾಕಿಸ್ತಾನ ಪರ ಮಾತನಾಡುವುದು ಸರಿಯಲ್ಲ
–ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಹಿಂದೂಗಳನ್ನು ಗುರಿ ಮಾಡಿ ದಾಳಿ ನಡೆಸಿದರೂ ಸಿದ್ದರಾಮಯ್ಯ ಹೀಗೆ ಹೇಳುತ್ತಾರೆಂದರೆ ಅವರೊಬ್ಬ ಮುಸ್ಲಿಂ ಏಜೆಂಟ್, ಪಾಕಿಸ್ತಾನದ ಏಜೆಂಟ್.
ಬಸನಗೌಡ ಪಾಟೀಲ ಯತ್ನಾಳ, ಶಾಸಕ
ತಮ್ಮ (ಸಿದ್ದರಾಮಯ್ಯ) ಬಾಲಿಶ ಹೇಳಿಕೆಗಳಿಂದ ಈಗ ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್ ಫೇಮಸ್ ಆಗಿ ಬಿಟ್ಟಿದ್ದೀರಿ; ಅಭಿನಂದನೆಗಳು. ಮುಂದೆಂದಾದರೂ ತಾವು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ತಮಗೆ ರಾಜಾತಿಥ್ಯ ಗ್ಯಾರಂಟಿ