‘ಆನ್‌ಲೈನ್‌ನಲ್ಲಿ ವಿವರ ನಮೂದಿಸಿ’
‘ವಿವಿಧ ಸಾಮಾಜಿಕ ಕಾರಣಕ್ಕೆ ಸಮೀಕ್ಷೆ ವೇಳೆ ಪರಿಶಿಷ್ಟ ಜಾತಿ ಸಮುದಾಯಗಳ ಜನರು ತಮ್ಮ ಜಾತಿಯ ಹೆಸರು ಹೇಳಲು ಆಗದ ಸಂದರ್ಭ ಎದುರಾಗಬಹುದು ಎಂಬ ನಿರೀಕ್ಷೆ ಇತ್ತು. ಹೀಗಾಗಿಯೇ ಮೂರು ಹಂತದಲ್ಲಿ ಮಾಹಿತಿ ಕಲೆ ಹಾಕಲು ಯೋಜನೆ ರೂಪಿಸಿದ್ದೇವೆ. ಮನೆ ಮಾಲೀಕರಿಗೆ ಗೊತ್ತಾಗಬಾರದು ಎಂದು ಜಾತಿ ಹೆಸರು ಮುಚ್ಚಿಟ್ಟಿರುವ ಮಂದಿ ಸಮೀಕ್ಷಾ ಶಿಬಿರಗಳಿಗೆ ಬಂದು ವಿವರ ನೀಡಬಹುದು. ಇಲ್ಲವೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ವಿವರ ನಮೂದಿಸಬಹುದು’ ಎಂದು ಒಳಮೀಸಲಾತಿ ಸಂಬಂಧಿತ ಏಕ ಸದಸ್ಯ ವಿಚಾರಣಾ ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರು ತಿಳಿಸಿದರು.