ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ವೆಸ್ಟ್‌ ಕರ್ನಾಟಕ ಫೋರಂ: ಸಹ ಅಧ್ಯಕ್ಷರಾಗಿ ಉದ್ಯಮಿ ಸಜ್ಜನ್‌ ಜಿಂದಾಲ್‌ ನೇಮಕ

Published 17 ಅಕ್ಟೋಬರ್ 2023, 15:53 IST
Last Updated 17 ಅಕ್ಟೋಬರ್ 2023, 15:53 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸಲು ಹಿಂದೆ ರೂಪಿಸಿದ್ದ ‘ಇನ್‌ವೆಸ್ಟ್‌ ಕರ್ನಾಟಕ ಫೋರಂ’ ಅನ್ನು (ಐಕೆಎಫ್‌) ಪುನರ್‌ ರಚಿಸಲಾಗಿದ್ದು, ಸಹ ಅಧ್ಯಕ್ಷರನ್ನಾಗಿ ಉದ್ಯಮಿ ಸಜ್ಜನ್‌ ಜಿಂದಾಲ್‌ ಅವರನ್ನು ನೇಮಿಸಲಾಗಿದೆ.

ಕಿರ್ಲೋಸ್ಕರ್ ಸಿಸ್ಟಮ್ಸ್‌ ಅಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್‌, ಏಕಸ್‌ಇಂಕ್ ಸಮೂಹದ ಅಧ್ಯಕ್ಷ ಅರವಿಂದ್‌ ಮೆಳ್ಳಿಗೇರಿ, ಜೆಟ್ವಕ್ಸ್‌ ಕಂಪನಿಯ ಸಹ ಸಂಸ್ಥಾಪಕ ಅಂಕಿತ್‌ ಫತೇಪುರಿಯಾ, ಕೆನ್ನಮೆಟಲ್ ವ್ಯವಸ್ಥಾಪಕ ನಿರ್ದೇಶಕ ವಿಜಯಕೃಷ್ಣನ್‌ ವೆಂಕಟೇಶನ್‌ ಅವರನ್ನು ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾಹಿತಿ ನೀಡಿದ್ದಾರೆ.

ಕಾರ್ಯತಂತ್ರ ಹೂಡಿಕೆ ಸಮಿತಿ (ಎಸ್ಐಸಿ) ಅಸ್ತಿತ್ವಕ್ಕೆ: 

ಐಕೆಎಫ್‌ಗೆ ಮಾರ್ಗದರ್ಶನ ನೀಡಲು ಇದೇ ಮೊದಲ ಬಾರಿಗೆ ಕಾರ್ಯತಂತ್ರ ಹೂಡಿಕೆ ಸಮಿತಿ (ಎಸ್ಐಸಿ) ರಚಿಸಲಾಗಿದೆ.  ಉದ್ಯಮ ವಲಯದ ಮೃತ್ಯುಂಜಯ ಹಿರೇಮಠ, ರಾಮ್ ಟಿ. ಚಂದನಾನಿ, ಪ್ರಶಾಂತ್‌ ಪ್ರಕಾಶ್‌, ನಿಖಿಲ್‌ ಕಾಮತ್‌, ರವಿ ಮಾನಚಂದ್‌, ಅಶ್ವಿನ್‌ ಕೃಷ್ಣಸ್ವಾಮಿ, ಗೌರಿ ಶಂಕರ್‌ ನಾಗಭೂಷಣಂ, ಕಾಸರಗೋಡು ಉಲ್ಲಾಸ್‌ ಕಾರಂತ್‌ ಅವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. 

ಅಮೆರಿಕ, ಜರ್ಮನಿ, ಫ್ರಾನ್ಸ್‌, ನೆದರ್‌ಲೆಂಡ್ಸ್‌, ಜಪಾನ್‌. ದಕ್ಷಿಣ ಕೊರಿಯಾ, ತೈವಾನ್‌ ಕಂಪನಿಗಳ ಜತೆ ನೂತನ ಸಮಿತಿ ವ್ಯವಹರಿಸಲಿದೆ. ರಾಜ್ಯಕ್ಕೆ ಹೆಚ್ಚಿನ ಹೂಡಿಕೆಯನ್ನು ಸೆಳೆಯಲು ಶ್ರಮಿಸಲಿದೆ ಎಂದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT