ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಐಟಿ ರಸಪ್ರಶ್ನೆ: ಛತ್ತೀಸ್‌ಗಢದ ಉದಿತ್‌ ಪ್ರಥಮ

Published 30 ನವೆಂಬರ್ 2023, 16:27 IST
Last Updated 30 ನವೆಂಬರ್ 2023, 16:27 IST
ಅಕ್ಷರ ಗಾತ್ರ

ಬೆಂಗಳೂರು:ತಂತ್ರಜ್ಞಾನ ಶೃಂಗಸಭೆಯ ಅಂಗವಾಗಿ ಹಮ್ಮಿಕೊಂಡಿದ್ದ ಗ್ರಾಮೀಣ ಐಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಛತ್ತೀಸ್‌ಗಢದ ಭಿಲಾಯ್‌ನ ಬಿಎಸ್‌ಪಿ ಶಾಲೆಯ ಉದಿತ್‌ ಪ್ರತಾಪ್ ಸಿಂಗ್‌ ಪ್ರಥಮ ಸ್ಥಾನ, ಗೋವಾದ ಬಿಚೋಲಿಂನ ಡಾ.ಕೆ.ಬಿ.ಹೆಡ್ಗೆವಾರ್‌ ವಿದ್ಯಾಮಂದಿರದ ವಿಘ್ನೇಶ್‌ ನೌಸೋ ಶೆಟ್ಯೆ ದ್ವಿತೀಯ ಸ್ಥಾನ ಪಡೆದರು.

ದೇಶದ 26 ರಾಜ್ಯಗಳು ಹಾಗೂ ಐದು ಕೇಂದ್ರಾಡಳಿತ ಪ್ರದೇಶಗಳ 5.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಿದ್ದ 24ನೇ ಆವೃತ್ತಿಯ ಅಂತಿಮ ಸ್ಪರ್ಧೆಗೆ ಎಂಟು ತಂಡಗಳು ಆಯ್ಕೆಯಾಗಿದ್ದವು. 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆ ಆಯೋಜಿಸಲಾಗಿತ್ತು.

ಪ್ರಥಮ ಸ್ಥಾನಕ್ಕೆ ₹1 ಲಕ್ಷ, ದ್ವಿತೀಯ ಸ್ಥಾನಕ್ಕೆ ₹50 ಸಾವಿರ ನಗದು, ಇತರೆ ಸ್ಪರ್ಧಿಗಳಿಗೆ ಟಿಸಿಎಸ್‌ ನೀಡುವ ತಲಾ ₹10 ಸಾವಿರ ವಿದ್ಯಾರ್ಥಿ ವೇತನವನ್ನು ಐಟಿ–ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT