ಬೆಂಗಳೂರು: ಜಲ ಜೀವನ ಮಿಷನ್ ಯೋಜನೆ ಅಡಿ ಶೇ 100ರಷ್ಟು ಗುರಿ ಸಾಧನೆ ಮಾಡಿದ ಹಲವು ರಾಜ್ಯಗಳಿಗೂ ಕೇಂದ್ರ ಸರ್ಕಾರ ಮತ್ತೆ ಅನುದಾನ ಬಿಡುಗಡೆ ಮಾಡಿದೆ. ಆದರೆ ಅದು, ಬಳಕೆಯೇ ಆಗಿಲ್ಲ.

ಕಾಮಗಾರಿ ಬಾಕಿ ಇರುವ ಕರ್ನಾಟಕಕ್ಕೆ ಹಂಚಿಕೆಯಾದ ಅನುದಾನದಲ್ಲಿ ಕೇಂದ್ರದಿಂದ ಒಟ್ಟು ₹16,863 ಕೋಟಿ ಬಿಡುಗಡೆಯಾಗಿಲ್ಲ.

ಶೇ 100ರಷ್ಟು ಗುರಿ ಸಾಧಿಸಿದ ರಾಜ್ಯಗಳಲ್ಲಿ ಹೊಸದಾಗಿ ನಿರ್ಮಾಣವಾದ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಆದರೆ ಆ ಅನುದಾನ ಬಳಕೆಯಾಗದೇ ಹಾಗೇ ಉಳಿದಿದೆ ಎಂಬುದನ್ನು ಕೇಂದ್ರ ಸರ್ಕಾರದ ಅಂಕಿಅಂಶಗಳೇ ಹೇಳುತ್ತವೆ.

ಅರುಣಾಚಲ ಪ್ರದೇಶವು ಮನೆಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವಲ್ಲಿ 2023–24ರಲ್ಲೇ ಶೇ 100ರಷ್ಟು ಗುರಿ ಸಾಧಿಸಿದೆ. 2024–25ನೇ ಸಾಲಿನಲ್ಲಿ ಕೇಂದ್ರವು ಆ ರಾಜ್ಯಕ್ಕೆ ₹217.82 ಕೋಟಿ ಅನುದಾನ ಹಂಚಿಕೆ ಮಾಡಿದೆ. ಅದರಲ್ಲಿ ₹108.91 ಕೋಟಿಯನ್ನು ಬಿಡುಗಡೆ ಮಾಡಿದೆ. ಆದರೆ ಅರುಣಾಚಲ ಪ್ರದೇಶ ಸರ್ಕಾರವು ಅದರಲ್ಲಿ ವೆಚ್ಚ ಮಾಡಿದ್ದು ₹22.93 ಕೋಟಿ ಮಾತ್ರ.

ಶೇ 100ರಷ್ಟು ಗುರಿ ತಲುಪಿದ ಪಂಜಾಬ್ಗೆ 2024–25ರಲ್ಲಿ ₹644.54 ಕೋಟಿ ಹಂಚಿಕೆ ಮಾಡಿ, ₹50 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ಬಳಕೆಯಾಗಿದ್ದು ₹3 ಕೋಟಿಯಷ್ಟೆ. ಹರಿಯಾಣವು ಎಲ್ಲ ಮನೆಗಳಿಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದೆ ಎಂದು ಕೇಂದ್ರ ಸರ್ಕಾರವೇ ದೃಢಪಡಿಸಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹462.03 ಕೋಟಿ ಹಂಚಿಕೆ ಮಾಡಿದೆ. ಅದರಲ್ಲಿ ಬಳಕೆಯಾಗಿದ್ದು ₹18 ಕೋಟಿಯಷ್ಟೆ.

ಗುರಿ ಸಾಧಿಸಿಯೂ ಅನುದಾನ ಪಡೆದುಕೊಂಡು, ಅದನ್ನು ಬಳಕೆ ಮಾಡಿಕೊಳ್ಳದ ರಾಜ್ಯಗಳ ಪಟ್ಟಿಯಲ್ಲಿ ಹಿಮಾಚಲ ಪ್ರದೇಶ, ಮಿಜೋರಾಂ, ತೆಲಂಗಾಣ, ಗುಜರಾತ್ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.